ನರಸಿಂಹರಾಜಪುರ : (ನ್ಯೂಸ್ ಮಲ್ನಾಡ್ ವರದಿ) ದಯಾಮರಣ ಅನುಮತಿಸಬೇಕೆಂದು ರೈತರು ಸಾಮೂಹಿಕವಾಗಿ ರಾಷ್ಟ್ರಪತಿಗಳಿಗೆ ಪತ್ರದ ಮೂಲಕ ಕೋರಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರದಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಸಾರ್ಯ, ಸಾಲೂರು, ಹೆನ್ನಂಗಿ, ಬೆಳ್ಳಂಗಿ, ಅಳೆಹಳ್ಳಿ, ಸಾಲೂರು, ಕೊಳಲೆ ಮುಂತಾದ ಗ್ರಾಮಗಳ ರೈತರು ಭದ್ರಾ ಹುಲಿ ಯೋಜನೆಯ ಬಫರ್ ಯೋಜನೆಗೆ ತಮ್ಮ ವ್ಯಾಪ್ತಿಯನ್ನು ಸೇರಿಸಿರುವ ಕುರಿತಾಗಿ ವಿರೋಧ ವ್ಯಕ್ತಪಡಿಸಿದ್ದಾರೆ ಹಾಗೂ ಸಾಮೂಹಿಕವಾಗಿ ರಾಷ್ಟ್ರಪತಿಗಳಿಗೆ ದಯಾ ಮರಣವನ್ನು ನೀಡುವಂತೆ ಪತ್ರ ಬರೆದಿದ್ದಾರೆ.
ಗ್ರಾಮಸ್ಥರ ಅಳಲನ್ನು ಲೆಕ್ಕಿಸದೆ ಸರ್ಕಾರ ಈ ನಿರ್ಣಯ ಕೈಗೊಂಡಿರುವುದು ಸರಿಯಲ್ಲ, ರೈತರನ್ನು ಓಲೈಸಲು ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಳ್ಳದೇ ಈ ರೀತಿಯಾಗಿ ವ್ಯವಹರಿಸಿರುವುದು ಅತ್ಯಂತ ಶೋಚನೀಯ. ಈ ಹಿಂದೆಯೂ ಕೂಡ ಈ ಗ್ರಾಮಗಳ ಜನರನ್ನು ಒಕ್ಕಲೆಬ್ಬಿಸುವ ತಂತ್ರ ನಡೆದಿತ್ತು ನಂತರದಲ್ಲಿ ಇಲ್ಲೇ ಪುನರ್ ವಸತಿ ಕಲ್ಪಿಸಲಾಗಿದೆ.
ಜನರಿಗೆ ಅತ್ಯಾವಶ್ಯಕವಾಗಿರುವ ಸವಲತ್ತುಗಳನ್ನು ನೀಡಲು ಆಗದೇ ಇರುವ ಸರ್ಕಾರ ಇನ್ನೊಮ್ಮೆ ಯಾರ ಅಭಿಪ್ರಾಯಕ್ಕೂ ಬೆಲೆ ನೀಡದೆ ಸ್ಥಳೀಯರನ್ನು ಅತಂತ್ರ ಸ್ಥಿತಿಗೆ ತಂದು ನಿಲ್ಲಿಸಿದೆ ಎಂದು ಜನರು ದೂರಿದ್ದಾರೆ.
ಒಂದೇ ಈ ಯೋಜನೆಗೆ ತಡೆ ಹಿಡಿಯಬೇಕು ಇಲ್ಲದೇ ಹೋದಲ್ಲಿ ಸಾಮೂಹಿಕ ದಯಾ ಮರಣಕ್ಕೆ ಒಪ್ಪಿಗೆ ನೀಡಬೇಕು ಎಂದು ಊರಿನ ಹಿರಿಯರು, ರೈತರು ಹಾಗೂ ಸ್ಥಳೀಯರು ಮನವಿ ಮಾಡಿದ್ದಾರೆ.

0 Comments