ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ನಗರದ ಕಲ್ದೊಡ್ಡಿ ಶಾಂತಿನಗರದಲ್ಲಿ ವಿವೇಕಾನಂದ ಜನ್ಮದಿನದ ಅಂಗವಾಗಿ ಕಾರ್ಯಕ್ರಮ ನೆರವೇರಿತು.

ಚಿಕ್ಕಮಗಳೂರು ನಗರದ ಕಲ್ದೊಡ್ಡಿ ಶಾಂತಿನಗರದಲ್ಲಿ ಸಿಡಿಲ ಸಂತ ವೀರಸನ್ಯಾಸಿ ವಿಶ್ವವಿಜೇತ ವಿವೇಕಾನಂದರ 159ನೇ ಜನ್ಮ ದಿನದ ಕಾರ್ಯಕ್ರಮದ ಆಚರಣೆ ನಡೆಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ವಿವೇಕಾನಂದ ಯುವಕ ಸಂಘದ ಅಧ್ಯಕ್ಷರಾದ ರಾಜು ಆರ್ .ಕಲ್ದೊಡ್ಡಿ ಬಲಿಷ್ಠ ಭಾರತದ ನಿರ್ಮಾಣಕ್ಕಾಗಿ ತಮ್ಮ ಇಡೀ ಜೀವನವನ್ನು ಮುಡಿಪಿಟ್ಟು ವಿವೇಕಾನಂದರು ಸಾಕಷ್ಟು ಶ್ರಮ ವಹಿಸಿದ್ದರು 1983 ರ ವಿಶ್ವ ಧರ್ಮ ಸಮ್ಮೇಳನದಲ್ಲಿ ಭಾರತದ ಗರಿಮೆಯನ್ನು ಹಿಂದೂ ಧರ್ಮದ ಮೌಲ್ಯವನ್ನು ಜಗತ್ತಿಗೆ ಸಾರಿದರು ವಿಶ್ವಪರ್ಯಟನೆ ಮುಖಾಂತರ ಇಡೀ ಜಗತ್ತನ್ನೇ ಸುಸಂಸ್ಕೃತ ರಾಷ್ಟ್ರವಾಗಿಸಲು ಕಾರ್ಯನಿರ್ವಹಿಸಿದ್ದರು ವಿವೇಕಾನಂದರ ತತ್ವ ಸಿದ್ಧಾಂತವನ್ನು ಪ್ರತಿಯೊಬ್ಬ ಭಾರತೀಯರು ಮೈಗೂಡಿಸಿಕೊಳ್ಳಬೇಕಾಗಿದೆ

ಇಂದು ಜಗತ್ತಿಗೆ ಕಂಟಕವಾಗಿರುವ ಕೊರೋನಾ ಮಹಾಮಾರಿಯು ಆದಷ್ಟು ಬೇಗ ಶಮನವಾಗಬೇಕಿದೆ, ಇಡೀ ಜಗತ್ತಿಗೆ ಒಳ್ಳೆಯದಾಗಬೇಕಿದೆ ಎಂದರು. 

ವಿವೇಕಾನಂದ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ರಾಮು, ದೇವರಾಜ, ಹೇಮಂತ,ಪರಮೇಶ್, ವೆಂಕಟೇಶ್ ಮುಂತಾದವರು ಉಪಸ್ಥಿತರಿದ್ದರು