ಶೃಂಗೇರಿ :(ನ್ಯೂಸ್ ಮಲ್ನಾಡ್ ವರದಿ)
ಬಿಜೆಪಿ ಜನಸಾಮಾನ್ಯರಿಗೊಂದು ಕಾನೂನು ಹಾಗೂ ಕಾಂಗ್ರೆಸ್ಸಿಗರ ಮೇಲೆ ಮೃದು ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಜೆಡಿಎಸ್ ಪಕ್ಷದ ಶೃಂಗೇರಿ ಕ್ಷೇತ್ರಾಧ್ಯಕ್ಷರಾದ ದಿವಾಕರ್ ಭಟ್ ದೂರಿದ್ದಾರೆ.

ರಾಜ್ಯ ಬಿಜೆಪಿ ಸರ್ಕಾರವು ಜನ ಸಾಮಾನ್ಯರಿಗೆ ಜೀವನ ನಡೆಸಲು ಬಿಡದೆ ಅವರಿಗೆ ತಮ್ಮ ದೈನಂದಿನ ಕೆಲಸಗಳನ್ನು ಮಾಡದಂತೆ ಅವೈಜ್ಞಾನಿಕವಾಗಿ ಒಂದೆಡೆ ವಾರಾಂತ್ಯದ ಕರ್ಫ್ಯೂವನ್ನು ವಿಧಿಸಿದರೆ ಇನ್ನೊಂದೆಡೆ ಯಾವುದೇ ನಿಯಮಗಳನ್ನು ಅನುಸರಿಸದೇ ಕಾಂಗ್ರೆಸ್ ಪಕ್ಷವು ನಡೆಸುತ್ತಿರುವ ಪಾದಯಾತ್ರೆಗೆ ನಿರ್ಬಂಧ ಹೇರಿಲ್ಲ ಇದು ಅತ್ಯಂತ ಖಂಡನೀಯವಾಗಿದೆ ಸರ್ಕಾರವು ಈ ಕುರಿತಾಗಿ ಬೇಜವಾಬ್ದಾರಿ ವಹಿಸಿದೆ ಸರ್ಕಾರ ತನ್ನ ಅಸಹಾಯಕತೆಯನ್ನು ತೋರಿಸಿದೆ ಎಂದು ವಾಗ್ದಾಳಿ ನಡೆಸಿದರು.

ಒಂದೆಡೆ ಜನ ಸಾಮಾನ್ಯರ ಮೇಲೆ ಅತಿಯಾದ ನಿಯಮಗಳನ್ನು ಅವೈಜ್ಞಾನಿಕವಾಗಿ ಹೇರಿ ಇನ್ನೊಂದೆಡೆ ರಾಜಕೀಯ ಮುಖಂಡರು ನಿಯಮಾವಳಿಗಳನ್ನು ಪಾಲಿಸದೇ ಇದ್ದರೂ ಕೂಡ ಅವರ ಮೇಲೆ ಕ್ರಮ ಕೈಗೊಳ್ಳದೇ ಇರುವುದು ಅತ್ಯಂತ ಖಂಡನೀಯ ಎಂದರು. ವ್ಯಕ್ತಿಗಳು ಬೇರೆ ಯಾರೇ ಆಗಿದ್ದರೂ ಈ ರೀತಿಯ ಒಂದು ಪಾದಯಾತ್ರೆ ಅಥವಾ ಇನ್ನೊಂದು ಸಭೆ ಸೇರಿದ್ದರೆ ಎಲ್ಲರ ಮೇಲೂ ಕಾನೂನು ಕ್ರಮ ಕೈಗೊಳ್ಳಲಾಗುತ್ತುತಿತ್ತು ಆದರೆ ಸರ್ಕಾರದ ಬಲಹೀನತೆಯನ್ನು ಇಲ್ಲಿ ತೋರಿಸುವುದರ ಮುಖಾಂತರ ಸರ್ಕಾರ ತನ್ನ ದೌರ್ಬಲ್ಯವನ್ನು ತೋರಿಸಿಕೊಂಡಿದೆ ಎಂದರು.

ಮುಂಬರುವ ದಿನಗಳಲ್ಲಿ ನಿಯಮಾವಳಿಗಳನ್ನು ಹೊರಡಿಸುವ ಬದಲು ಅನುಸರಿಸುವ ಕುರಿತಾಗಿ ಹೆಚ್ಚಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.