ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಪೊಲೀಸರ ಕಾರ್ಯಾಚರಣೆಯ ಮೂಲಕ ಅಕ್ರಮವಾಗಿ ಜೂಜಾಟ ನಡೆಸುತ್ತಿದ್ದ ತಂಡವೊಂದರ ಬಂಧನವಾಗಿದೆ.
ಕಾಫಿನಾಡು ಚಿಕ್ಕಮಗಳೂರಿನ ಪಟ್ಟಣದಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 36,200 ರೂ ನಗದು, ಮತ್ತು ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.
ಚಿಕ್ಕಮಗಳೂರಿನ ಮಧುವನ ಲೇಔಟ್ ನಲ್ಲಿ ಈ ದಾಳಿ ನಡೆದಿದ್ದು ಬೆಟ್ಟಿಂಗ್ ಆಡುತ್ತಿದ್ದ ಅಪರಾಧಿಗಳನ್ನು ಸಿ ಇ ಎನ್ ಪೊಲೀಸರು ಬಂಧಿಸಿ ಆರೋಪಿಗಳ ತನಿಖೆ ಆರಂಭಿಸಿದ್ದಾರೆ.
ಅಂಗಡಿ ಕಳ್ಳತನ ನಡೆಸಿದ್ದ ಆರೋಪಿಗಳು ಸೆರೆ :
2019 ರ ಫೆಬ್ರವರಿಯಲ್ಲಿ ಮೂಡಿಗೆರೆ ಬಿಳಗೊಳ ಗ್ರಾಮದಲ್ಲಿ ಅಗ್ರಿಮಾರ್ಟ್ ಅಂಗಡಿಯಲ್ಲಿ ಕಳ್ಳತನ ಎಸಗಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ, 3.80 ಲಕ್ಷ ಬೆಲೆಯ ಕೃಷಿ ಯಂತ್ರೋಪಕರಣಗಳನ್ನು ಕಳವು ಮಾಡಿದ್ದ ಇಬ್ಬರು ಆರೋಪಿಗಳು ಪೊಲೀಸರ ಸತತ ಪ್ರಯತ್ನದಿಂದ ಬಂಧಿಸಲ್ಪಟ್ಟಿದ್ದಾರೆ.
0 Comments