ಕಳಸ :(ನ್ಯೂಸ್ ಮಲ್ನಾಡ್ ವರದಿ) ಕಳಸದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅನುಮತಿ ಪಡೆಯದೇ ಚಿತ್ರೀಕರಣ ನಡೆಸಿದ ಘಟನೆ ಬೆಳಕಿಗೆ ಬಂದಿದೆ.
ಕಳಸದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಒಳ ಪ್ರವೇಶಿಸಿದ ಚಿತ್ರೀಕರಣದ ತಂಡ ಯಾವುದೇ ಅನುಮತಿಯನ್ನು ಪಡೆಯದೇ ಕಾಲೇಜಿನ ಒಳಗೆ ಸಂಪೂರ್ಣವಾಗಿ ತಮ್ಮ ಸಿನಿಮಾ ಕಿಟ್, ಕ್ಯಾಮರಾ, ವಸ್ತುಗಳನ್ನು ಬಳಸಿಕೊಂಡು ಚಿತ್ರೀಕರಣಕ್ಕೆ ತಯಾರಾಗಿದ್ದಾರೆ ಈ ಸಂಧರ್ಭದಲ್ಲಿ ಪ್ರವೇಶಿಸಿದ ಓರ್ವರು ಅನುಮತಿಯ ಕುರಿತಾಗಿ ಪ್ರಶ್ನಿಸಿದಾಗ ಯಾವುದೇ ಸೂಕ್ತ ಅನುಮತಿಯನ್ನು ಪಡೆಯದೇ ಪ್ರವೇಶಿಸಿರುವುದು ಬೆಳಕಿಗೆ ಬಂದಿದೆ.
ಸರ್ಕಾರಿ ಸ್ವತ್ತುಗಳ ಬಳಕೆಗೆ ಎಲ್ಲೆಡೆಯೂ ಅನುಮತಿ ಪಡೆಯಲೇ ಬೇಕು, ಹೀಗಿರುವಾಗ ಅನುಮತಿ ಪಡೆಯದೇ ಚಿತ್ರೀಕರಣಕ್ಕೆ ಮುಂದಾಗಿರುವುದು ನಿಯಮ ಉಲ್ಲಂಘಸಿದಂತಾಗುತ್ತದೆ. ಸರ್ಕಾರಿ ಸ್ವತ್ತುಗಳ ನಿರ್ವಹಣೆ ಹಾಗೂ ಸೂಕ್ತ ಬಳಕೆಗಾಗಿ ಹಲವಾರು ನಿಯಮಗಳಿರುವಾಗ ಈ ಬೆಳವಣಿಗೆ ಗೊಂದಲ ಸೃಷ್ಟಿಸಿದೆ.

0 Comments