ಕೊಟ್ಟಿಗೆಹಾರ : (ನ್ಯೂಸ್ ಮಲ್ನಾಡ್ ವರದಿ) ವೈದ್ಯಕೀಯ ಪರೀಕ್ಷೆಯಲ್ಲಿ ಮಲೆನಾಡಿನ ಕುವರಿಯೋರ್ವಳು ಸಾಧನೆ ಮಾಡಿದ್ದಾಳೆ. 

ಮೂಡಬಿದರೆ ಆಳ್ವಾಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದ ಪೂಜಾ ಎಂಬ ವಿದ್ಯಾರ್ಥಿನಿ ಮೂಲತಃ ಕೊಟ್ಟಿಗೆಹಾರದವಳು, ಈಕೆ ಕೊಟ್ಟಿಗೆಹಾರದ ಗೋಪಾಲ್ ಹಾಗೂ ಸುಶೀಲ ದಂಪತಿಗಳ ಪುತ್ರಿಯಾಗಿದ್ದು  ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕೊಟ್ಟಿಗೆಹಾರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿ ನಂತರ ಮೂಡಬಿದರೆ ಆಳ್ವಾಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದರು. ನವೆಂಬರ್ ನಲ್ಲಿ ನಡೆದ ಪದವಿ ಸ್ನಾತಕೋತ್ತರ ಬಿ.ಎ.ಎಂ.ಎಸ್ ಪರೀಕ್ಷೆಯ ಫಲಿತಾಂಶ ಬಂದಿದ್ದು ರಾಜ್ಯಕ್ಕೆ ಎರಡನೆಯ ರ್ಯಾಂಕ್ ಪಡೆಯುವ ಮೂಲಕ ಪೋಷಕರ ಹಾಗೂ ಮಲೆನಾಡಿನ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. 

ಇದನ್ನೂ ಓದಿ :

ಮಲೆನಾಡಿನಲ್ಲಿ ಭೀಕರ ರಸ್ತೆ ಅಪಘಾತ; ಇಬ್ಬರ ದುರ್ಮರಣ

ಸತತ ಪರಿಶ್ರಮ ಹಾಗೂ ಛಲದ ಮೂಲಕ ಓದಿ ಇಂದು ಇಡೀ ಮಲೆನಾಡು ಹಾಗೂ ಪೋಷಕರು ಅತ್ಯಂತ ಹೆಮ್ಮೆ ಪಡುವಂತೆ ಮಾಡಿದ ಪೂಜಾ ಅವರ ಸಾಧನೆಗೆ ಗ್ರಾಮಸ್ಥರು, ಕಾಲೇಜಿನ ಸಿಬ್ಬಂದಿಗಳು, ಪೋಷಕರು ಅತ್ಯಂತ ಖುಷಿಯಿಂದ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆಯನ್ನು ಪೂಜಾ ಮಾಡಲಿ ಎಂದು ಗ್ರಾಮಸ್ಥರು ಹಾರೈಸಿದ್ದಾರೆ. 

ತನು ಕೊಟ್ಟಿಗೆಹಾರ, ವರದಿಗಾರರು