ಕಳಸ : (ನ್ಯೂಸ್ ಮಲ್ನಾಡ್ ವರದಿ) ಕಳಸದ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ದಯಾ ಮರಣವನ್ನು ನೀಡುವಂತೆ ರಾಷ್ಟ್ರಪತಿಗಳಿಗೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಒಂದೇ ಸೇವಾ ಭದ್ರತೆಯನ್ನು ನೀಡಿ ಅಥವಾ ಸೇವಾ ವಿಲೀನತೆ ನೀಡಿ ಇಲ್ಲದೇ ಹೋದಲ್ಲಿ ದಯಾಮರಣಕ್ಕೆ ಅನುಮತಿಸಿ ಎಂದು ತಾಲೂಕು ಆಡಳಿತದ ಮೂಲಕ ರಾಷ್ಟ್ರಪತಿ, ರಾಜ್ಯಪಾಲರು ಹಾಗೂ ಶಿಕ್ಷಣ ಸಚಿವರನ್ನು ಕೋರಿದ್ದಾರೆ.
ಸರ್ಕಾರದ ಆದೇಶದ ಪ್ರಕಾರವಾಗಿ ಗಮನಿಸಿದಾಗ ಅನೇಕ ಅತಿಥಿ ಉಪನ್ಯಾಸಕರು ತಮ್ಮ ಕೆಲಸವನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ. ಜೀವನ ನಡೆಸಲು ಅತ್ಯಂತ ಕಷ್ಟವಾಗಿದೆ ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ. ಇಬ್ಬರ ಸಂಬಳವನ್ನು ಕಿತ್ತುಕೊಂಡು ಒಬ್ಬರಿಗೆ ನೀಡುವುದು ಸರಿಯಲ್ಲ ಸರ್ಕಾರದ ಹೊಸ ಆದೇಶದಿಂದಾಗಿ ಅನೇಕ ಉಪನ್ಯಾಸಕರಿಗೆ ಬಹಳಷ್ಟು ತೊಂದರೆ ಉಂಟಾಗಿದೆ. ಸರ್ಕಾರ ಈ ಕೂಡಲೇ ಇದರ ಕುರಿತಾಗಿ ಗಮನಹರಿಸಿ ಯಾವುದೇ ಉಪನ್ಯಾಸಕರಿಗೆ ತೊಂದರೆ ಉಂಟಾಗದಂತೆ ಸಹಕರಿಸಬೇಕು ಎಂದು ಕೋರಿದ್ದಾರೆ.
ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರಾದ ಪ್ರಸಾದ್,ಸುಭಾಷ್, ಸಚಿನ್ ಕುಮಾರ್, ವೈಶಿರಿ, ಫಕೀರಪ್ಪ ಇದ್ದರು.

0 Comments