ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಕೊಪ್ಪದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತ್ತೆ ಸ್ಕಾರ್ಫ್ ಹಾಗೂ ಕೇಸರಿ ಶಾಲಿನ ವಿಚಾರವಾಗಿ ವಿವಾದ ಭುಗಿಲೆದ್ದಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಬಾಳಗಡಿ ರಸ್ಥೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳೆದ ಕೆಲ ವರ್ಷಗಳ ಹಿಂದೊಮ್ಮೆ ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿಗೆ ಸ್ಕಾರ್ಫ್ ಧರಿಸಿಬರುವ ಕುರಿತು ಗೊಂದಲಗಳು ಉಂಟಾಗಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲುಗಳನ್ನು ಧರಿಸಿಕೊಂಡು ಕಾಲೇಜಿಗೆ ಬರುತ್ತಿದ್ದರು ನಂತರದಲ್ಲಿ ಈ ಕುರಿತಾಗಿ ನಿರ್ಣಯ ಕೈಗೊಳ್ಳಲು ಕಾಲೇಜಿನ ಆಡಳಿತ ಮಂಡಳಿ ಪೋಷಕರ ಸಭೆಯನ್ನು ನಡೆಸಿ ಪರಿಸ್ಥಿತಿಯನ್ನು ಸರಿಗೊಳಿಸಿದ್ದರು.
ಆದರೆ ಪ್ರಸ್ತುತ ಅದೇ ವಿಚಾರವಾಗಿ ಇನ್ನೊಂದು ಘಟನೆ ಮರುಕಳಿಸಿದೆ. ಈ ವಿಚಾರವು ಇನ್ನೂ ದೊಡ್ಡ ಮಟ್ಟಕ್ಕೆ ತಲುಪುವ ಮುನ್ನ ಇದಕ್ಕೊಂದು ಅಂತ್ಯ ಕಾಣಬೇಕಿದೆ. ಈ ಕುರಿತಾಗಿ ಸರ್ಕಾರ ಹಾಗೂ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು ಯಾವ ರೀತಿಯ ಕ್ರಮ ಕೈಗೊಂಡು ವಿಧ್ಯಾರ್ಥಿಗಳ ಮಧ್ಯೆಯಿರುವ ಗೊಂದಲವನ್ನು ಪರಿಹರಿಸುತ್ತಾರೆ ಎಂದು ಕಾದು ನೋಡಬೇಕಿದೆ.

0 Comments