ಚಿಕ್ಕಮಗಳೂರು : ಜನರು ಕೊರೋನ ನಿಯಮಾವಳಿಗಳನ್ನು ಅನುಸರಿಸದೇ ಹೋದಲ್ಲಿ ಅವರ ಅವಶ್ಯ ಸಹಕಾರ ಸಿಗದೇ ಇದ್ದರೆ ಸರ್ಕಾರಕ್ಕೆ ಲಾಕ್ ಡೌನ್ ಅನಿವಾರ್ಯ ಎಂದು ಗೃಹ ಸಚಿವ ಆರಗಜ್ಞಾನೇಂದ್ರ ಹೇಳಿದರು.
ಈ ಕುರಿತು ಮಾತನಾಡಿದ ಅವರು ತಜ್ಞರು ಪ್ರತೀ ದಿನವೂ ಕೂಡ ಸೋಂಕಿನ ಕುರಿತಾಗಿ ಅದರ ಹರಡುವಿಕೆಯ ವೇಗದ ಪ್ರಮಾಣದ ಕುರಿತಾಗಿ ಗಮನಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಸೋಂಕಿನ ಪ್ರಮಾಣ ಹೆಚ್ಚುತ್ತಿದೆ, ಕೊರೋನ ನಿಯಂತ್ರಿಸಲು ಇರುವ ಒಂದೇ ಅಸ್ತ್ರವೆಂದರೆ ಲಾಕ್ ಡೌನ್, ಸರ್ಕಾರದ ಮುಂದೆ ಸದ್ಯಕ್ಕೆ ಲಾಕ್ ಡೌನ್ ಪ್ರಸ್ತಾಪವಿಲ್ಲ. ಮುಂಬರುವ ದಿನಗಳಲ್ಲಿ ಸೋಂಕಿನ ವೇಗ ತೀವ್ರ ತರವಾದರೆ ಸರ್ಕಾರ ಲಾಕ್ ಡೌನ್ ಮಾಡುವ ಕುರಿತಾಗಿ ಆಲೋಚಿಸಬೇಕಾಗುತ್ತದೆ ಎಂದರು.
ಎಲ್ಲೆಡೆಯೂ ಕೋವಿಡ್ ಕಠಿಣ ನಿಯಮಗಳನ್ನು ಅನುಸರಿಸುವುದು ಕಡ್ಡಾಯ ಯಾವುದೇ ನಿಯಮಗಳು ಉಲ್ಲಂಘನೆ ಆದರೂ ತೀವ್ರ ಶಿಕ್ಷೆಗೆ ಗುರಿ ಪಡಿಸಲಾಗುವುದು ಎಂದರು.ಸಾರ್ವಜನಿಕರು ಈ ಕುರಿತು ಹೆಚ್ಚಿನ ನಿಗಾವಹಿಸಬೇಕು ಎಲ್ಲೆಡೆ ಅಂತರ ಕಾಪಾಡಿಕೊಂಡು ಕಾರ್ಯ ನಿರ್ವಹಿಸಬೇಕು ಅಗತ್ಯವಾಗಿ ಜನತೆ ಮಾರ್ಗಸೂಚಿಗಳ ಪಾಲನೆ ಮಾಡಬೇಕೆಂದು ಗೃಹ ಸಚಿವ ಆರಗಜ್ಞಾನೇಂದ್ರ ಹೇಳಿದರು.
ತನು ಕೊಟ್ಟಿಗೆಹಾರ, ವರದಿಗಾರರು.

0 Comments