ಚಿಕ್ಕಮಗಳೂರು : ಚಾಲಕನ ನಿಯಂತ್ರಣ ತಪ್ಪಿ ಇನೋವಾ ಕಾರ್ ಪಲ್ಟಿಯಾದ ದುರ್ಘಟನೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಿರಗುಂದದ ಹಡ್ಲು ಗದ್ದೆ ತಿರುವಿನಲ್ಲಿ ಈ ದುರ್ಘಟನೆ ಸಂಭವಿಸಿದೆ. ಇನೋವಾ ಕಾರಿನಲ್ಲಿ ಮದುವೆಯ ಸಲುವಾಗಿ ಕೊಡಗಿನ ಸೋಮವಾರ ಪೇಟೆಯಿಂದ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಕಾರಿನಲ್ಲಿ ಪ್ರಯಾಣ ನಡೆಸುತ್ತಿದ್ದ ನಾಲ್ವರು ಕೂಡ ಅದೃಷ್ಟವಶಾತ್ ಪ್ರಣಾಪಾಯಾಗಳಿಂದ ಪಾರಾಗಿದ್ದಾರೆ.

ಕಾರಿನ ಕೆಲ ಭಾಗ ಜಖಂಗೊಂಡಿದೆ. ಘಟನೆ ನಡೆಯುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆಧಾವಿಸಿ ಕಾರಿನಲ್ಲಿದ್ದವರನ್ನು ಹಾಗೂ ಕಾರನ್ನು ಎತ್ತಲು ಸಹಾಯ ಮಾಡಿದರು.

ತನು ಕೊಟ್ಟಿಗೆಹಾರ, ವರದಿಗಾರರು.