ಆಲ್ದೂರು : (ನ್ಯೂಸ್ ಮಲ್ನಾಡ್ ವರದಿ) ಮಲೆನಾಡಿನ ಹೆಮ್ಮೆಯ ವಿದ್ಯಾರ್ಥಿಯೋರ್ವ ತನ್ನ ವಿದ್ಯಾಭ್ಯಾಸದ ಅವಧಿಯಲ್ಲೇ ಅತ್ಯುನ್ನತ ಸಾಧನೆ ಮಾಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ತಾಲೂಕಿನ ಚೇತನ್ ಎಂಬ ಮೂರನೇ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ವಿಜ್ಞಾನದ ಹೊಸ ಆವಿಷ್ಕಾರಗಳನ್ನು ಮಾಡುವಲ್ಲಿ ಯಶಸ್ವಿಯಾಗಿದ್ದಾನೆ. ಏಳು ಬಾರಿ ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆದ ಚೇತನ್ 21 ಬಾರಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದಾರೆ. ವಿದ್ಯಾರ್ಥಿ ಚೇತನ್ ತೆಲಂಗಾಣ, ಉತ್ತರ ಪ್ರದೇಶ, ತಮಿಳುನಾಡು, ಮೂರು ಬಾರಿ ಚೆನ್ನೈ, ಮಹಾರಾಷ್ಟ್ರ, ದೆಹಲಿ, ಗುಜರಾತ್,  ಜಾರ್ಖಂಡ್ ಸೇರಿದಂತೆ ಅನೇಕ ಕಡೆಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿ ಪ್ರಶಸ್ತಿ ಪಡೆದಿದ್ದಾರೆ.

ಪ್ರತಿಷ್ಠಿತ ಸಂಸ್ಥೆ KPIT ನಡೆಸುವ ವಿಜ್ಞಾನ ಸ್ಪರ್ಧೆಯಲ್ಲಿ ಇಡೀ ಭಾರತದಿಂದ ಕೇವಲ 100 ಜನರಿಗಷ್ಟೆ ಭಾಗವಹಿಸಲು ಅವಕಾಶ ದೊರೆಯುತ್ತದೆ ಆ ನೂರರಲ್ಲಿ ಕೇವಲ 26 ಜನ ಆಯ್ಕೆಗೊಂಡಿದ್ದಾರೆ ಅದರಲ್ಲೂ ಕರ್ನಾಟಕದಿಂದ ಆಯ್ಕೆಯಾದ ಕೇವಲ ಎರಡು ತಂಡಗಳಲ್ಲಿ ಚೇತನ್ ಕೂಡ ಓರ್ವ. ಮಲೆನಾಡಿನ ಹೆಮ್ಮೆಯ ಚೇತನ್ ಅವರು ಭಾಗವಹಿಸಿ ರಾಷ್ಟ್ರ ಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿರುವುದು ಎಲ್ಲರಿಗೂ ಹೆಮ್ಮೆ ತರುವಂಥದ್ದು. 

ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಯುವಕ ಇಂದು ತನ್ನ ಆಸಕ್ತಿಯ ಕ್ಷೇತ್ರದಲ್ಲಿ ಸ್ವ ಇಚ್ಛೆಯಿಂದ ಅತ್ಯದ್ಭುತ ಸಾಧನೆ ಮಾಡಿ ಹೆತ್ತವರಿಗೆ  ಹುಟ್ಟೂರಿಗೆ ಹಾಗೂ ರಾಜ್ಯಕ್ಕೆ ಹೆಮ್ಮೆ ತಂದಿರುತ್ತಾರೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಸಾಧನೆಗಳನ್ನು ಚೇತನ್ ಮಾಡುವಂತಾಗಲಿ ಎಂದು ಪೋಷಕರು, ಗ್ರಾಮಸ್ಥರು ಹಾಗೂ ಗೆಳೆಯರು ಹಾರೈಸಿದ್ದಾರೆ.