ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಮಲೆನಾಡು ಭಾಗದಲ್ಲಿ ಈ ಹಿಂದೆ ಅರ್ಭಟಿಸಿದ್ದ ಮಂಗನ ಕಾಯಿಲೆ ರೋಗವು ಕೆಲ ಸಮಯಗಳ ಕಾಲ ನಿಯಂತ್ರಣಕ್ಕೆ ಬಂದಿತ್ತು ಪ್ರಸ್ತುತ ಒಂದೇ ವಾರದಲ್ಲಿ ಇಬ್ಬರಲ್ಲಿ ಈ ಕಾಯಿಲೆಯು ಧೃಢಪಟ್ಟಿದೆ.

ಶಿವಮೊಗ್ಗ ಜಿಲ್ಲೆಯ ಆಯನೂರಿನ ಸರ್ಕಾರಿ ಶಾಲೆಯ ಶಿಕ್ಷಕರೋರ್ವರಲ್ಲಿ ಈ ಕಾಯಿಲೆ ದೃಢಪಟ್ಟಿದೆ. ಪ್ರಸ್ತುತ ಶಿಕ್ಷಕ ರಾಘವೇಂದ್ರ ಅವರು ಮಣಿಪಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಸೋಂಕು ಕಂಡು ಬಂದ ಕೆಲ ಸಮಯಗಳಿಂದ ಶಿವಮೊಗ್ಗದ ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಟ್ಟಿದ್ದರು ಸೋಂಕು ದೃಢಪಟ್ಟ ನಂತರದಲ್ಲಿ ಮಣಿಪಾಲದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ : ಮೂಡಿಗೆರೆ ಶಾಸಕ ಹಾಗೂ ಪೊಲೀಸರ ನಡುವೆ ಕಿರಿಕ್, ಹಲ್ಲೆ ಆರೋಪಕ್ಕೆ ಸ್ಪಷ್ಟನೆ ನೀಡಿದ ಕುಮಾರಸ್ವಾಮಿ

ಈ ಹಿಂದೆ ತೀರ್ಥಹಳ್ಳಿ ಯ ಮಹಿಳೆಯೋರ್ವರಿಗೆ ಕಾಯಿಲೆ ದೃಢಪಟ್ಟಿತ್ತು. ಈ ಕುರಿತು ಮಲೆನಾಡಿಗರಲ್ಲಿ ಆತಂಕ ಉಂಟಾಗಿದೆ ಎಲ್ಲರೂ ಆರೋಗ್ಯದ ಮೇಲೆ ಹೆಚ್ಚಿನ ನಿಗಾವಹಿಸಬೇಕೆಂದು   ತಿಳಿಸಲಾಗಿದೆ.