ತೀರ್ಥಹಳ್ಳಿ : (ನ್ಯೂಸ್ ಮಲ್ನಾಡ್ ವರದಿ) ತೀರ್ಥಹಳ್ಳಿಯಲ್ಲಿ ಎಳ್ಳಮವಾಸ್ಯೆಯ ಅಂಗವಾಗಿ ಕಳೆದ ಎರಡೂ ದಿನಗಳಿಂದ ಅದ್ಧೂರಿಯಾಗಿ ನಡೆಯುತ್ತಿರುವ ಜಾತ್ರೆಯು ಇಂದು ಸಂಪನ್ನಗೊಳ್ಳಲಿದೆ.

ಜಾತ್ರೆಯ ಕೊನೆಯ ದಿನವಾದ ಇಂದು ತುಂಗಾ ನದಿಯಲ್ಲಿ ತೆಪ್ಪೋತ್ಸವ ನಡೆಯಲಿದೆ ಈ ಕುರಿತಾಗಿ ಹೆಚ್ಚಿನ ತಯಾರಿಗಳನ್ನು ದೇವಸ್ಥಾನ ಮಂಡಳಿ ಹಾಗೂ ಭಕ್ತವೃಂದ ನಡೆಸುತ್ತಿದೆ. ಗೃಹಮಂತ್ರಿಗಳ ತವರು ಕ್ಷೇತ್ರವಾದ ತೀರ್ಥಹಳ್ಳಿ ಎಳ್ಳಮವಾಸ್ಯೆ ಜಾತ್ರೆಯು ಅತ್ಯಂತ ಪ್ರಸಿದ್ಧ ಹಾಗೂ ಕಾರ್ಣಿಕವಾಗಿದೆ. ಈ ಜಾತ್ರೆಗೆಂದೇ ಜಿಲ್ಲೆಯ ಹಾಗೂ ರಾಜ್ಯದ ಬೇರೆ ಬೇರೆ ಭಾಗಗಳಿಂದ ಜನರು ಆಗಮಿಸುತ್ತಿದ್ದಾರೆ. ಪವಿತ್ರ ತೀರ್ಥಸ್ನಾನ, ನಿನ್ನೆ ಭಕ್ತಿ ಭಾವಗಳಿಂದ ರಥೋತ್ಸವ ನಡೆದಿದ್ದು ಈ ಸಮಯದಲ್ಲಿ ಗೃಹಸಚಿವ ಆರಗಜ್ಞಾನೇಂದ್ರ ಅವರೂ ಪಾಲ್ಗೊಂಡರು. ಇಂದು ಅತ್ಯಂತ ವೈಭವದಿಂದ ತುಂಗಾ ನದಿಯಲ್ಲಿ ತೆಪ್ಪೋತ್ಸವ ಜರುಗಲಿದೆ ಹಾಗೂ ಸಿಡಿಮದ್ದುಗಳ ಪ್ರದರ್ಶನವು ಈ ಸಂದರ್ಭದಲ್ಲಿ ನಡೆಯಲಿದೆ. 

ಕೋವಿಡ್ ನಿಯಮಾವಳಿಗಳನ್ನು ಮಾರ್ಗಸೂಚಿಗಳನ್ನು ಅನುಸರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಸರ್ಕಾರ ಆದೇಶಿಸಿದೆ ಹಾಗೂ ಹೆಚ್ಚು ಸಮಯವನ್ನು ತೆಗೆದುಕೊಳ್ಳದೇ ರಾತ್ರಿ ಹತ್ತು ಗಂಟೆಯ ಒಳಗೆ ಸಂಪೂರ್ಣವಾಗಿ ಕಾರ್ಯಕ್ರಮವನ್ನು ಮುಗಿಸುವುದಾಗಿ ಗೃಹ ಸಚಿವರನ್ನೊಳಗೊಂಡ ಜಾತ್ರಾ ಸಮಿತಿಯು ತೀರ್ಮಾನಿಸಿರುವುದಾಗಿ ಮಾಹಿತಿ ದೊರೆತಿದೆ.

https://chat.whatsapp.com/I2r7uKjzrF9AlSwMn2xClg


ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಾತ್ರೆಯ ಕೊನೆಯ ದಿನವಾದ ಇಂದು ಆಗಮಿಸುವ ಸಲುವಾಗಿ ಜಿಲ್ಲಾಡಳಿತ ಪೊಲೀಸ್ ಅಧಿಕಾರಿಗಳು ಹಾಗೂ ಸ್ಥಳೀಯ ಅಧಿಕಾರಿಗಳು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವುದಾಗಿ ಮಾಹಿತಿ ನೀಡಿದೆ.