ಚಿಕ್ಕಮಗಳೂರು : ಶಾಲಾ ಬಸ್ ಮಗುಚಿ ಬಿದ್ದು ಶಾಲಾ ಮಕ್ಕಳಿಗೆ ಗಾಯಗಳಾದ ಘಟನೆ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಅಂತರಘಟ್ಟೆ ಸಮೀಪದ ಹಡುಗುಲು ಗ್ರಾಮದಲ್ಲಿ ಜ್ಞಾನ ಭಾರತಿ ಶಾಲಾ ಬಸ್ಸು ಮಗುಚಿದೆ, ವಿದ್ಯಾರ್ಥಿಗಳನ್ನು ಮನೆಗಳಿಂದ ಶಾಲೆಗೆ ಕರೆತರುವಾಗ ಈ ದುರ್ಘಟನೆ ಸಂಭವಿಸಿದೆ ಅದೃಷ್ಟವಶಾತ್ ಮಕ್ಕಳಿಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಕೇವಲ ಸಣ್ಣ ಪುಟ್ಟ ಗಾಯಗಳಾಗಿದೆ. ಬಸ್ಸಿನಲ್ಲಿದ್ದ ಮಕ್ಕಳು ಸುರಕ್ಷಿತವಾಗಿದ್ದಾರೆ. 

ಇದನ್ನೂ ಓದಿ :

ಬಾಬ್ರಿ ಮಸೀದಿಯ ರೀತಿಯಲ್ಲಿ ಶ್ರೀ ರಂಗಪಟ್ಟಣದ ಮಸೀದಿ ಧ್ವಂಸ ಮಾಡಬೇಕು ಹೇಳಿಕೆ; ಚಿಕ್ಕಮಗಳೂರಿನಲ್ಲಿ ಸ್ವಾಮೀಜಿ ಅರೆಸ್ಟ್

ಘಟನೆಯ ಕುರಿತಾಗಿ ವಿಚಾರ ತಿಳಿಯುತ್ತಿದ್ದಂತೆ ಕೂಡಲೇ ಅಜ್ಜಂಪುರ ಪೊಲೀಸ್ ಠಾಣೆಯ ಪಿ.ಎಸ್.ಐ ಬಸವರಾಜ್ ಆಗಮಿಸಿ ಗಾಯಗೊಂಡ ಮಕ್ಕಳನ್ನು ಆಸ್ಪತ್ರಗೆ ದಾಖಲಿಸುವ ಸಲುವಾಗಿ ವ್ಯವಸ್ಥೆ ಮಾಡಿದ್ದಾರೆ ಎನ್ನಲಾಗಿದೆ. 

ಘಟನೆಯ ಕುರಿತಾಗಿ ಅಜ್ಜಂಪುರ ಪೊಲೀಸರು ಬಸ್ ಚಾಲಕನ ವಿರುದ್ದ ಪ್ರಕರಣ ದಾಖಲಿಸಿದ್ದು ಶೀಘ್ರವೇ ಚಾಲಕನ ತನಿಖೆ ನಡೆಯಲಿದೆ ಎಂಬ ಮಾಹಿತಿ ದೊರೆತಿದೆ.

ತನು ಕೊಟ್ಟಿಗೆಹಾರ, ವರದಿಗಾರರು.