ಕಳಸ : (ನ್ಯೂಸ್ ಮಲ್ನಾಡ್ ವರದಿ) ಗಣರಾಜ್ಯೋತ್ಸವದ ಆಚರಣೆಯ ಸಂದರ್ಭದಲ್ಲಿ ವೇದಿಕೆಯಲ್ಲೇ ಕಿತ್ತಾಟ ನಡೆಸಿದ ಘಟನೆ ಕಳಸದಲ್ಲಿ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಾಗಿ ಘೋಷಣೆಯಾದ ಬಳಿಕದ ಅತ್ಯಂತ ಮಹತ್ವಪೂರ್ಣ ಕಾರ್ಯಕ್ರಮವಾದ ಗಣರಾಜ್ಯೋತ್ಸವದ ಆಚರಣೆಯ ದಿನದಂದು ರಾಜಕೀಯ ಪಕ್ಷಗಳ ನಾಯಕರುಗಳು ಕಳಸ ತಾಲೂಕಾಗಿ ಮಾರ್ಪಾಡಾಗಲು ಶಾಸಕ ಎಂ.ಪಿ ಕುಮಾರಸ್ವಾಮಿ ಹಾಗೂ ಬಿಜೆಪಿ ಸರ್ಕಾರ ಕಾರಣ ಎಂದು ಹೇಳಿದುದನ್ನು ವಿರೋಧಿಸಿ ವೇದಿಕೆಯಲ್ಲೇ ಕಿತ್ತಾಟ ನಡೆದಿದೆ.

ಬಿಜೆಪಿ ಪರವಾಗಿ ಹಾಗೂ ಶಾಸಕ ಎಂ.ಪಿ ಕುಮಾರಸ್ವಾಮಿ ಅವರನ್ನು ಹೆಚ್ಚಿನದಾಗಿ ಹೊಗಳಿದ ಕಾರಣ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಮುಖಂಡರು ನಾಯಕರುಗಳು ಹೇಳಿಕೆಯನ್ನು ವಿರೋಧಿಸಿ ವಾಗ್ವಾದಕ್ಕೆ ಇಳಿದರು. ನಂತರದಲ್ಲಿ ಪೊಲೀಸರು ಉಂಟಾಗಿದ್ದ ಅಸಮಾಧಾನವನ್ನು ನಿಯಂತ್ರಿಸಲು ಹರ ಸಾಹಸ ಪಟ್ಟು ಪರಿಸ್ಥಿತಿಯನ್ನು ತಿಳಿಗೊಳಿಸಿದರು. 

ಇದನ್ನೂ ಓದಿ :ಶೃಂಗೇರಿಯಲ್ಲಿ ಸಡಗರ ಸಂಭ್ರಮದಿಂದ ನಡೆದ ಗಣರಾಜ್ಯೋತ್ಸವದ ಆಚರಣೆ

ಈ ಕಾರ್ಯಕ್ರಮದಲ್ಲಿ ಶಾಸಕ ಎಂಪಿ ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಡಾ.ನಾಗರಾಜ್ ಹಾಗೂ ಇನ್ನಿತರ ಗಣ್ಯರು ಹಾಜರಿದ್ದರು ಅವರುಗಳ ಮುಂದೆ ಹಾಗೂ ಭಾರತೀಯರು ಎಲ್ಲರೂ ಒಂದಾಗಿ ಆಚರಿಸಬೇಕಾದ ರಾಷ್ಟ್ರೀಯ ಆಚರಣೆಯ ಕಾರ್ಯಕ್ರಮದ ನಡುವಿನಲ್ಲಿ ಈ ರೀತಿಯಾದ ಅಗೌರವ ತರುವ ಘಟನೆ ನಡೆದದ್ದು ಅತ್ಯಂತ ಶೋಚನೀಯವೆ ಸರಿ.