ಕಳಸ : (ನ್ಯೂಸ್ ಮಲ್ನಾಡ್ ವರದಿ) ಜೈನ ಧರ್ಮದ ಕುರಿತಾಗಿ ಅವ ಹೇಳನಕಾರಿ ಪೋಸ್ಟ್ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ ಎಂದು ಆರೋಪಿಸಿ ಕಳಸದ ಪೊಲೀಸ್ ಠಾಣೆಗೆ ಜೈನ ಸಮುದಾಯದ ಶ್ರಾವಕರು ದೂರು ನೀಡಿದ್ದಾರೆ.

ಇದನ್ನೂ ಓದಿ : ಮಲೆನಾಡಿಗರ ಮೂಲಭೂತ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸುವಂತೆ ಮನವಿ ಸಲ್ಲಿಸಿದ ಕರ್ನಾಟಕ ಜನಶಕ್ತಿ ಸಂಘ

ಜೈನ ಧರ್ಮದ ಕುರಿತಾಗಿ ಹಾಗೂ ದೇವರ ಕುರಿತಾಗಿ ಐದು ಜನರು ಫೇಸ್ಬುಕ್ ನಲ್ಲಿ ಅವಹೇಳನಕಾರಿಯಾಗಿ ಬರೆದು ಧರ್ಮ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಪೊಲೀಸ್ ಠಾಣೆಯಲ್ಲಿ ಕಳಸ ತಾಲೂಕಿನ ಜೈನ ಧರ್ಮೀಯರು ದೂರು ದಾಖಲಿಸಿದ್ದಾರೆ. 

ಜೈನ ಧರ್ಮದ ವಿರುದ್ದ ಅವಹೇಳನಕಾರಿಯಾಗಿ ಧರ್ಮನಿಂದನೆ ಮತ್ತು ಸಮಾಜದ ಸ್ವಾಸ್ಥ್ಯವನ್ನು ಕೆದಡುವ ರೀತಿಯ ಬರಹಗಳನ್ನು ಎಲ್ಲೆಡೆ ಹರಿಬಿಡುತ್ತಿದ್ದಾರೆ ಎಂದು ಆರೋಪಿಸಿ ಆಕಾಶ್ ಲಕ್ವಳ್ಳಿ, ಗುರು ಅಕ್ಕಿ, ಕಿರಣ್ ಕೆ.ಜಿ.ಎಫ್, ರವಿ ಹೊಸ್ಕೆರೆ ಹಾಗೂ ಶ್ರೀ ನಾಯಕ್ ಉಡುಪಿ ಎಂಬ ವ್ಯಕ್ತಿಗಳ ಮೇಲೆ ಕಳಸದ ಜೈನ ಧರ್ಮೀಯರು ದೂರು ನೀಡಿದ್ದಾರೆ ಹಾಗೂ ಆದಷ್ಟು ಬೇಗ ಆರೋಪಿಗಳನ್ನು ಠಾಣೆಗೆ ಕರೆಸಿ ಈ ಸಂಬಂಧ ವಿಚಾರಣೆ ನಡೆಸಿ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಕೋರಿದ್ದಾರೆ.