ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಮಲೆನಾಡಿಗರು ಎದುರಿಸುತ್ತಿರುವ ಅಸಮರ್ಪಕ ಮೂಲಭೂತ ಸೌಕರ್ಯಗಳ ಕುರಿತಾದ ಸಮಸ್ಯೆಯನ್ನು ಅತೀ ಶೀಘ್ರವಾಗಿ ಪರಿಹರಿಸಬೇಕೆಂದು ಕರ್ನಾಟಕ ಜನಶಕ್ತಿ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳನ್ನು ಹಾಗೂ ಶಾಸಕ ಟಿ.ಡಿ ರಾಜೇಗೌಡ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಇದನ್ನೂ ಓದಿ : ಕಾಫಿನಾಡಿನಲ್ಲಿ ನವ ವಿವಾಹಿತೆಯ ಅನುಮಾನಾಸ್ಪದ ಸಾವು ಪತಿಯೊಂದಿಗೆ ರಾತ್ರಿ ಇಡೀ ಕಾಡಿನಲ್ಲಿದ್ದ ಪತ್ನಿ ಬೆಳಗಾಗುವಷ್ಟರಲ್ಲಿ ಶವ

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದ ಕೊಪ್ಪ, ಶೃಂಗೇರಿ, ಮೂಡಿಗೆರೆ, ಹಾಗೂ ನರಸಿಂಹರಾಜಪುರ ತಾಲೂಕುಗಳಲ್ಲಿ ಅತ್ಯಂತ ಹೆಚ್ಚಿನದಾಗಿ ಕೃಷಿಕರು, ದಲಿತರು,ಬಡವರು ಹಿಂದುಳಿದ ವರ್ಗಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದು ಈ ಜನರಿಗೆ ಅಗತ್ಯವಾಗಿ ಕಲ್ಪಿಸಲೇಬೇಕಾದ ರಸ್ತೆ ಸೌಲಭ್ಯ, ಆಶ್ರಯದ ಸಲುವಾಗಿ ಮನೆ, ಹಾಗೂ ಕೃಷಿಕಾರ್ಯಗಳನ್ನು ಈ ವರೆಗೆ ನಡೆಸಿಕೊಂಡು ಬಂದಿದ್ದರೂ ಕೂಡ ಅವರುಗಳ ಹೆಸರಿಗೆ ಯಾವುದೇ ಪೂರಕವಾದ ದಾಖಲೆಗಳನ್ನು ಮಾಡಿಕೊಟ್ಟಿಲ್ಲ ಆದಕಾರಣ ಅತೀ ಶೀಘ್ರವಾಗಿ ಮಲೆನಾಡಿನ ಎಲ್ಲಾ ವರ್ಗದ ಜನರ ಉತ್ತಮ ಜೀವನಕ್ಕಾಗಿ ಯೋಜನೆಗಳನ್ನು ರೂಪಿಸಿ ಮಲೆನಾಡಿಗರ ಜೀವನಕ್ಕೆ ಪೂರಕವಾಗುವ ಆಯಾಮಗಳಲ್ಲಿ ಕಾರ್ಯ ನಿರ್ವಹಿಸಬೇಕೆಂದು ಕರ್ನಾಟಕ ಜನಶಕ್ತಿ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮೇಗುಂದಾ ಹೋಬಳಿಯ ಹೆಗ್ಗಾರು ಗ್ರಾಮದ ಹ್ಯಾರನಕಲ್ಲು ಹಾಗೂ ಬೈಸಿಗದ್ದೆ ಎಂಬ ಊರಿನ ದಲಿತ ಕುಟುಂಬಗಳಿಗೆ ಅತ್ಯವಶ್ಯಕವಾಗಿರುವ ಮೂಲಭೂತ ಸೌಕರ್ಯಗಳನ್ನು ಅತೀ ಶೀಘ್ರವಾಗಿ ಒದಗಿಸಬೇಕೆಂದು ಶಾಸಕ ಟಿ.ಡಿ ರಾಜೇಗೌಡ ಅವರಿಗೆ ಮನವಿ ಸಲ್ಲಿಸಿದ್ದಾರೆ.