ಮೂಡಿಗೆರೆ : (ನ್ಯೂಸ್ ಮಲ್ನಾಡ್ ವರದಿ) ಟ್ರ್ಯಾಕ್ಟರ್ ಅವಘಡ ಸಂಭವಿಸಿ ಇತ್ತೀಚಿಗಷ್ಟೇ ಮದುವೆಯಾದ ಯುವಕನೋರ್ವ ಮೃತಪಟ್ಟ ಹೃದಯವಿದ್ರಾವಕ ಘಟನೆ ಮೂಡಿಗೆರೆಯಲ್ಲಿ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿದರಹಳ್ಳಿ ಗ್ರಾಮದ ನಟರಾಜ್ ಎಂಬುವವರ ಪುತ್ರ ಹರೀಶ್ ಟ್ರ್ಯಾಕ್ಟರ್ ದುರಂತದಲ್ಲಿ ಮೃತಪಟ್ಟಿದ್ದಾರೆ. ಎಂದಿನಂತೆ ಬೆಳಗ್ಗೆ ಟ್ರ್ಯಾಕ್ಟರ್ ಓಡಿಸುವ ಕೆಲಸಕ್ಕೆ ತೆರಳಿದ್ದ ಹರೀಶ್ ಅವರು ಟ್ರ್ಯಾಕ್ಟರ್ ಚಲಾಯಿಸುತ್ತಿದ್ದ ಸಮಯದಲ್ಲಿ ಟ್ರ್ಯಾಕ್ಟರ್ ನಿಯಂತ್ರಣಕ್ಕೆ ಬಾರದೇ ಸಾವನ್ನಪ್ಪಿದ್ದಾರೆ. 

ಮೂಡಿಗೆರೆ ಸಮೀಪದ ಹಳೆಕೋಟೆ ಬಳಿಯ ಆರ್ ಆರ್ ಎಸ್ ತೋಟದಲ್ಲಿ ಇನ್ ಟ್ರ್ಯಾಕ್ಟರ್ ಚಾಲನೆ ಮಾಡುತ್ತಿರುವಾಗ ನಿಯಂತ್ರಣಕ್ಕೆ ಬಾರದೆ ಟ್ರ್ಯಾಕ್ಟರ್ ಇಳಿಜಾರಿಗೆ ಉರುಳಿದ ಪರಿಣಾಮ ಹರೀಶ್ ಅವರು ಮೃತಪಟ್ಟಿದ್ದಾರೆ ಎಂದು ಮಾಹಿತಿ ದೊರೆತಿದೆ.

ಹರೀಶ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮೂಡಿಗೆರೆಯ ಎಂಜಿಎಂ ಆಸ್ಪತ್ರೆಗೆ   ರವಾನಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆಯ ಕುರಿತು ಸಂಪೂರ್ಣ ತನಿಖೆ ನಡೆದ ನಂತರ ಇನ್ನಷ್ಟು ಹೆಚ್ಚಿನ ವಿವರಗಳು ದೊರಕಲಿದೆ. 

ತನು ಕೊಟ್ಟಿಗೆಹಾರ, ವರದಿಗಾರರು.