ಕಳಸ : (ನ್ಯೂಸ್ ಮಲ್ನಾಡ್ ವರದಿ) ಮಲೆನಾಡು ಪ್ರದೇಶವಾದ ಕಳಸವನ್ನು ತಾಲೂಕು ಕೇಂದ್ರವನ್ನಾಗಿ ಮಾಡಲು ಅನೇಕ ವರ್ಷಗಳಿಂದ ಬಹಳಷ್ಟು ಜನ ಶ್ರಮವಹಿಸಿದ್ದಾರೆ ಆದರೆ ಈ ಕಾರ್ಯಕ್ರಮದ ಉದ್ಘಾಟನೆಗೆ ಸರ್ವರನ್ನೂ ಆಹ್ವಾನ ಮಾಡಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಲವಾರು ವರ್ಷಗಳಿಂದ ಕಳಸವನ್ನು ತಾಲ್ಲೂಕು ಕೇಂದ್ರವನ್ನಾಗಿಸಲು ಜಿ.ಕೆ ಮಂಜಪ್ಪಯ್ಯ, ಹೆಚ್.ಡಿ ಜಾಲ್ನನಯನವರು, ಬಿ.ಬಿ.ನಿಂಗಯ್ಯ, ದಿವಂಗತ ಧರ್ಮೇಗೌಡರು, ಎಸ್.ಎಲ್ ಭೋಜೇಗೌಡ, ಎಮ್.ಕೆ ಪ್ರಾಣೇಶ್,ರಂಜನ್ ಅಜಿತ್ ಕುಮಾರ್,ಕೆ.ಆರ್ ಪ್ರಭಾಕರ್ ಗೌಡ, ಬಿ.ಎಲ್ ಸಂದೀಪ್, ಸಂತೋಷ ಹಿನಾರಿ ಇನ್ನೂ ಅನೇಕ ರಾಜಕೀಯ ಮುಖಂಡರುಗಳು ಪಕ್ಷಬೇಧ ಮರೆತು ಒಂದಾಗಿ ಕೆಲಸ ಮಾಡಿದ್ದಾರೆ ಆದರೆ ಕಳಸ ತಾಲ್ಲೂಕು ದಂಡಾಧಿಕಾರಿಗಳ ಕಾರ್ಯಾಲಯ ಉದ್ಘಾಟನೆ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೂ ಆಹ್ವಾನ ನೀಡದೆ ಉದ್ಘಾಟನೆ ಮಾಡಿರುವುದು ಅತ್ಯಂತ ಬೇಸರದ ಸಂಗತಿ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
ಕಳಸದ ಎಲ್ಲಾ ಪಕ್ಷಗಳು ಸಂಘ ಸಂಘಟನೆಗಳು ಕಳಸದ ನಾಗರಿಕ ಬಂಧುಗಳು ಸೇರಿ ಮಾಡಬೇಕಾದಂಥ ಕಾರ್ಯಕ್ರಮವನ್ನು ಕಳಸದ ಯಾವ ನಾಗರಿಕರಿಗೂ ತಿಳಿಸದೆ ಹಾಗೂ ಕಳಸ ತಾಲ್ಲೂಕು ವ್ಯಾಪ್ತಿಗೆ ಒಳಪಡುವಂತಹ ಚುನಾಯಿತ ಪ್ರತಿನಿಧಿಗಳನ್ನು ಕರೆಯದೆ ಕಾರ್ಯಕ್ರಮ ನಡೆಸಿರುವುದು ಸರಿಯಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
ಸಭೆ ಸಮಾರಂಭಗಳನ್ನು ನಡೆಸಲು ಅನುಮತಿ ಇಲ್ಲದ ಕಾರಣ ಕೆಲ ವ್ಯಕ್ತಿಗಳಿಗಷ್ಟೇ ಸೀಮಿತಗೊಳಿಸಿ ಈ ಕಾರ್ಯಕ್ರಮವನ್ನು ನಡೆಸಿರಬಹುದು ಎಂದು ಇನ್ನೊಂದೆಡೆ ಅಂದಾಜಿಸಲಾಗಿದೆ. ಒಟ್ಟಿನಲ್ಲಿ ಸತತ ಹೋರಾಟ ಹಾಗೂ ಪರಿಶ್ರಮದ ಅಂಗವಾಗಿ ಕಳಸ ತಾಲೂಕು ಕೇಂದ್ರವಾಗಿ ಮಾರ್ಪಾಡುಗೊಂಡಿರುವುದು ಸಾರ್ವಜನಿಕರಿಗೆ ಸಂತಸ ತಂದಿದ್ದರೆ ಇನ್ನೊಂದೆಡೆ ಕಾರ್ಯಕ್ರಮಕ್ಕೆ ಆಹ್ವಾನ ನೀಡದೆ ಇರುವುದು ಬೇಸರಕ್ಕೀಡುಮಾಡಿದೆ.

0 Comments