ಬಣಕಲ್ : ರಾಜ್ಯಾದ್ಯಂತ ಕೊರೋನ ನಿಯಂತ್ರಣ ಮಾಡುವ ಸಲುವಾಗಿ ಸರ್ಕಾರ ವೀಕೆಂಡ್ ಕರ್ಫ್ಯೂ ಆದೇಶ ಹೊರಡಿಸಿದೆ ಈ ನಿಟ್ಟಿನಲ್ಲಿ ಕಾಫಿನಾಡು ಹೆಚ್ಚಿನ ಮಟ್ಟದಲ್ಲಿ ಸ್ಥಬ್ದವಾಗಿತ್ತು. ಈ ಸಂದರ್ಭದಲ್ಲಿ ಧಾರಾವಾಹಿ ಚಿತ್ರೀಕರಣ ನಡೆಸುತ್ತಿದ್ದ ತಂಡವನ್ನು ಪೊಲೀಸರು ತರಾಟೆಗೆ ತೆಗೆದುಕೊಂಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಫಲ್ಗುಣಿ ಗ್ರಾಮದ ಕೆಫೆಯೊಂದರಲ್ಲಿ ನಿಯಮ ಉಲ್ಲಂಘನೆ ಮಾಡಿ ಚಿತ್ರೀಕರಣ ನಡೆಸುತ್ತಿದ್ದ ಧಾರಾವಾಹಿ ತಂಡದ ಸದಸ್ಯರನ್ನು ಬಣಕಲ್ ಠಾಣೆಯ ಪೊಲೀಸರು ಮುಲಾಜಿಲ್ಲದೆ ಸ್ಥಳದಿಂದ ತೆರಳುವಂತೆ ಖಡಕ್ ಆಗಿ ಎಚ್ಚರಿಸಿದ್ದಾರೆ.
ಚಿತ್ರೀಕರಣ ನಡೆಸುತ್ತಿದ್ದ ಕೆಫೆಗೆ ತೆರಳಿದ ಬಣಕಲ್ ಠಾಣೆಯ ಠಾಣಾಧಿಕಾರಿ ಗಾಯಿತ್ರಿ ಅವರು ಶೂಟಿಂಗ್ ನಡೆಸುತ್ತಿದ್ದ ತಂಡಕ್ಕೆ ಕೂಡಲೇ ಶೂಟಿಂಗ್ ನಿಲ್ಲಿಸುವಂತೆ ಖಡಕ್ ಆಗಿ ಎಚ್ಚರಿಸಿದರು ಹಾಗೂ ಚಿತ್ರೀಕರಣಕ್ಕೆ ಬಳಸುವ ವಸ್ತುಗಳನ್ನು ಪ್ಯಾಕ್ ಮಾಡಿಕೊಂಡು ತೆರಳುವಂತೆ ಸೂಚಿಸಿದರು.
ಒಂದೆಡೆ ಕಾಫಿನಾಡಿನ ಹಲವು ಪೊಲೀಸರು ಕೊರೋನ ಸೋಂಕಿನಿಂದ ಬಳಲುತ್ತಿದ್ದರೆ ಇನ್ನೊಂದೆಡೆ ಸೋಂಕನ್ನು ನಿಯಂತ್ರಿಸುವ ಸಲುವಾಗಿ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದಾರೆ.

0 Comments