ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ನೆಮ್ಮಾರು ಪಂಚಾಯಿತಿಯ ಗ್ರಾಮ ಲೆಕ್ಕಿಗ ಸಿದ್ದಪ್ಪ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾನೆ.

ಪರಮ ಭ್ರಷ್ಟ ಎಂದೇ ಕುಖ್ಯಾತಿ ಪಡೆದಿದ್ದ ಈತ ಈ ಹಿಂದೆ ಕಡೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ, ನಂತರ ಶೃಂಗೇರಿಗೆ ವರ್ಗವಾಗಿ ಕಾರ್ಯ ನಿರ್ವಹಿಸುತ್ತಿದ್ದ. ಕಳೆದ ಒಂದು ವಾರದಿಂದ ಬಲೆ ಬೀಸಿದ್ದ ಎಸಿಬಿ ಅಧಿಕಾರಿಗಳು ಇಂದು ಖೆಡ್ಡಾ ಗೆ ಕೆಡವಿದ್ದಾರೆ.

ಹಕ್ಕುಪತ್ರ ವಿಚಾರವಾಗಿ ಶೃಂಗೇರಿಯ ನಿರೀಕ್ಷಣಾ ಮಂದಿರದಲ್ಲಿ ಲಂಚ ಪಡೆಯುತ್ತಿದ್ದ ವೇಳೆ ಹಿಡಿಯಲಾಗಿದೆ.  ಈ ಕುರಿತು ಹೆಚ್ಚಿನ ವಿಚಾರಣೆ ನಡೆಯುತ್ತಿದ್ದು ಎಸಿಬಿ ಅಧಿಕಾರಿಗಳು ಭ್ರಷ್ಟ ಅಧಿಕಾರಿಯನ್ನು ತನಿಖೆ ನಡೆಸುತ್ತಿದ್ದಾರೆ.

ಎಸಿಬಿ ಅಧಿಕಾರಿಗಳು ಇನ್ನೂ ಒಂದು ವಾರಗಳ ಕಾಲ ಶೃಂಗೇರಿಯಲ್ಲಿ ದಾಳಿ ಮುಂದುವರೆಸಿದಲ್ಲಿ ಕಳ್ಳರನ್ನು ತುಂಬಿಸಿಕೊಂಡು ಹೋಗಲು ದೊಡ್ಡ ವ್ಯಾನ್ ಅನ್ನೇ ತರಬೇಕಾಗಬಹುದು, ಆದರೆ ಕ್ಷೇತ್ರದ ರಾಜಕಾರಣಿಗಳು ಬಳೆ ಒಡೆದುಕೊಂಡು ಅಳುವ ಸಾಧ್ಯತೆಯೂ ಹೆಚ್ಚಿರುವ ಕಾರಣ ದಾಳಿ ಮುಂದುವರೆಯುವ ಸಾಧ್ಯತೆ ಕಡಿಮೆಯಿದೆ.

ಬಹಳ ದುರಹಂಕಾರಿಯಾಗಿದ್ದ ಈತ ಲಾಭವಿಲ್ಲದ ಜನಸಾಮಾನ್ಯರ, ರೈತರ ಕೆಲಸ ಎಂದರೆ ಸಾಕು ಸಂಬಳ ಇಲ್ಲದೆ ಪುಕ್ಕಟೆಯಾಗಿ ಸೇವೆ ಮಾಡುತ್ತಿರುವವನಂತೆ ಮುಖ ಸಿಂಡರಿಸಿಕೊಂಡೇ ಇರುತ್ತಿದ್ದ, ಸರಿಯಾಗಿ ಕಛೇರಿಗೂ ಬಾರದೆ, ಕಛೇರಿ ಫೈಲ್ ಗಳನ್ನು ತನ್ನ ಕಾರಿಗೆ ಇಟ್ಟುಕೊಂಡಿರುವ ಖಾಸಗಿ ಡ್ರೈವರ್ ನ ಮೂಲಕವೇ ನಿರ್ವಹಿಸುತ್ತಿದ್ದ, ಗ್ರಾಮ ಲೆಕ್ಕಾಧಿಕಾರಿ ಈತನೋ ಅಥವಾ ಡ್ರೈವರೋ ಎಂಬ ಗೊಂದಲ ಉಂಟಾಗಿದೆ ಎಂದು ಹಲವು ಬಾರಿ ಸಾರ್ವಜನಿಕರು ಮಾತಾಡುತ್ತಿದ್ದದ್ದೂ ಇತ್ತು.


ಇಂದಿನ ದಾಳಿ ಸಂಧರ್ಭದಲ್ಲಿ ಎಸಿಬಿ ಡಿವೈಎಸ್ಪಿ ಸಿ.ಆರ್. ಗೀತಾ, ಇನ್ಸ್ಪೆಕ್ಟರ್ ಮಂಜುನಾಥ್, ಎ.ಜಿ ರಾಥೋಡ್, ಹೆಡ್ ಕಾನ್ಸ್ಟೇಬಲ್ ಗಳಾದ ದೇವರಾಜ, ಪ್ರಕಾಶ್, ವೇದಾವತಿ, ಸಿಬ್ಬಂದಿ ವರ್ಗದವರು ಇದ್ದರು