ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಮನೆಗಳಿಗೆ ಕನ್ನ ಹಾಕಿ ಎಸ್ಕೇಪ್ ಆಗುತ್ತಿದ್ದ ಕಳ್ಳರನ್ನು ಪೊಲೀಸರು ಕಾರ್ಯಾಚರಣೆಯ ಮೂಲಕ ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸುವ ಮೂಲಕ ಬೈಕ್ ಹಾಗೂ ಮನೆ ಕಳ್ಳತನ ಮಾಡುತ್ತಿದ್ದವರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳ ಮೇಲೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ 01 ಪ್ರಕರಣ, ಹೊಳೆಹೊನ್ನೂರು ಠಾಣೆಯಲ್ಲಿ 01 ಪ್ರಕರಣ, ತುಂಗಾನಗರ ಪೊಲೀಸ್ ಠಾಣೆಯಲ್ಲಿ 02 ಪ್ರಕರಣಗಳು ದಾಖಲಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಶೃಂಗೇರಿ : ಆತ್ಮಹತ್ಯೆಗೆ ಶರಣಾದ ವ್ಯಕ್ತಿ
ಬಂಧನಕ್ಕೊಳಗಾದವರನ್ನು ಮಿಳಘಟ್ಟದ ಪ್ರವೀಣ್, ಶಿವಮೊಗ್ಗದ ಸುರೇಶ್ ಅಲಿಯಾಸ್ ಕರಡಿ ಸುರೇಶ್, ಗಾಜನೂರು ಶಿವಕುಮಾರ್, ಅಭಿಷೇಕ್ ಎಂದು ಗುರುತಿಸಲಾಗಿದೆ. ಬಂಧಿತರಿಂದ ಕದಿಯಲ್ಪಟ್ಟ ಎಂಟು ಬೈಕ್, ಒಂದು ಟಿವಿ, 52 ಗ್ರಾಂ ಬಂಗಾರವನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ಮಾಹಿತಿ ದೊರೆತಿದೆ
ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಹೊಳೆಹೊನ್ನೂರು ಪೊಲೀಸ್ ಠಾಣೆಯ ಪಿಐ ಲಕ್ಷ್ಮೀಪತಿ, ಪಿಎಸ್‌ಐ ಸುರೇಶ್ ಸಿಬ್ಬಂದಿ ಲಿಂಗೇಗೌಡ, ಮಂಜುನಾಥ್, ಪ್ರಸನ್ನ, ಪ್ರಕಾಶ್ ನಾಯ್ಕ, ವಿಶ್ವನಾಥ್ ಹಾಗೂ ಕಾಶಿನಾಥ್ ಪಾಲ್ಗೊಂಡಿದ್ದರು.

0 Comments