ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ ತಾಲೂಕಿನಲ್ಲಿ ಎಲ್ಲಾ ಶಾಲೆಗಳಿಗೂ ಮಾದರಿಯಾಗಿ ಹೊರ ಹೊಮ್ಮಿರುವ ಮೆಣಸೆ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಾದ ಡಾ. ಬಿ.ಆರ್ ಗಂಗಾಧರಪ್ಪ ಅವರನ್ನು ಆದರ್ಶ ರೈತಮಿತ್ರ ಕೂಟ ಕೆರೆಮನೆ ವತಿಯಿಂದ ಸನ್ಮಾನಿಸಲಾಯಿತು.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮೆಣಸೆ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯನ್ನು ಯಾವುದೇ ಖಾಸಗೀ ಶಾಲೆಗಳಿಗಿಂತ ಕಡಿಮೆ ಇಲ್ಲದಂತೆ ಪೂರಕವಾದ ವ್ಯವಸ್ಥೆ ಹಾಗೂ ಅತ್ಯಂತ ಸೌಲಭ್ಯಯುತವಾಗಿ ಶಾಲೆಯನ್ನು ಅತ್ಯುನ್ನತ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಸತತ ಪರಿಶ್ರಮಹಾಕಿ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಅಡಿಪಾಯ ಹಾಕಿದ ಶಾಲೆಯ ಮುಖ್ಯೋಪಾಧ್ಯಾಯ ಡಾ.ಬಿ.ಆರ್ ಗಂಗಾಧರಪ್ಪ ಅವರನ್ನು ಗೌರವಿಸುವ ಸಲುವಾಗಿ ಈ ಸನ್ಮಾನ ಕಾರ್ಯಕ್ರಮವನ್ನು ನಡೆಸಲಾಗಿದೆ ಎಂದು ಆದರ್ಶ ರೈತಮಿತ್ರ ಕೂಟದ ಪದಾಧಿಕಾರಿಗಳು ತಿಳಿಸಿದರು.
ದೇಶದಲ್ಲಿ ಅನೇಕ ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ಬಂದು ತಲುಪಿದೆ ಅಂತಹುದರಲ್ಲಿ ಮಲೆನಾಡಿನಂತಹ ಜಾಗದಲ್ಲಿ ತಮ್ಮ ಸೇವೆಯ ಆರಂಭದ ದಿನಗಳಿಂದಲೆ ಎಲ್ಲರೂ ಒಮ್ಮೆ ಸರ್ಕಾರಿ ಶಾಲೆಯನ್ನು ಹಾಗೂ ಅಲ್ಲಿನ ಸೌಲಭ್ಯಗಳ ಕುರಿತಾಗಿ ಒಮ್ಮೆ ತಿರುಗಿ ನೋಡುವಂತೆ ಮಾಡಿದ ಒಬ್ಬ ಶ್ರೇಷ್ಟ ಶಿಕ್ಷಕ ಗಂಗಾಧರಪ್ಪ ಎಂದು ಅವರ ಸೇವೆಯನ್ನು ಗುರುತಿಸಿದ್ದಾರೆ.
ಇದನ್ನೂ ಓದಿ : ಅಮಾನವೀಯ ರೀತಿಯಲ್ಲಿ 26 ಜಾನುವಾರುಗಳನ್ನು ತುಂಬಿದ್ದ ಲಾರಿ ಪತ್ತೆ ; ಸ್ಥಳದಿಂದ ಚಾಲಕ ಎಸ್ಕೇಪ್
ಕೇವಲ ಶಾಲೆಗೆ ಸೌಲಭ್ಯ ಮಾತ್ರವಲ್ಲ ಅಲ್ಲಿನ ವಿದ್ಯಾರ್ಥಿಗಳನ್ನು ಭಾರತದ ಉತ್ತಮ ಪ್ರಜೆಯಾಗಿ ಹೊರ ಕಳುಹಿಸುತ್ತಿರುವ ಶಿಕ್ಷಕ ಗಂಗಾಧರಪ್ಪ ಆಗಿದ್ದಾರೆ. ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮ, ಪ್ರತಿಭಾಕಾರಂಜಿ, ಮುಂತಾದ ಅನೇಕ ಅನೇಕ ಸ್ಪರ್ಧೆಗಳಲ್ಲಿ ರಾಜ್ಯ ಮಟ್ಟದವರೆಗೆ ಪುರಸ್ಕಾರ ದೊರೆಯುವಂತೆ ವಿದ್ಯಾರ್ಥಿಗಳನ್ನು ತಯಾರು ಮಾಡಿ ಆ ಮೂಲಕ ಶಾಲೆಯ, ಊರಿನ ಹಾಗೂ ಪೋಷಕರ ಹೆಸರನ್ನು ಅತ್ಯಂತ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಅವರ ಪಾತ್ರ ಅಗಾಧವಾದುದು ಎಂದು ಪದಾಧಿಕಾರಿಗಳು ತಿಳಿಸಿದರು.
ಈ ರೀತಿಯಾಗಿ ಸರ್ಕಾರಿ ಶಾಲೆಗಳನ್ನು ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಶಿಕ್ಷಕರು ಯಶಸ್ವಿಯಾಗಬೇಕು ಎಂದು ಆದರ್ಶ ರೈತ ಮಿತ್ರ ಕೂಟ ಕೆರೆಮನೆ ಇದರ ಪದಾಧಿಕಾರಿಗಳು ಹಾರೈಸಿದ್ದಾರೆ. ಈ ಸಂದರ್ಭದಲ್ಲಿ ಶಿಕ್ಷಕ ರಾಜೀವ್, ಭರತ್ ರಾಜ್ ಕೆರೆಮನೆ, ಹಾಗೂ ಪದಾಧಿಕಾರಿಗಳು ಹಾಜರಿದ್ದರು.

0 Comments