ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಟಿ ರವಿ ಅವರ ತಂದೆ ಇಂದು ದೈವಾಧೀನರಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಶಾಸಕ ಸಿ.ಟಿ ರವಿ ಅವರ ತಂದೆ ಸಿ.ಈ ತಿಮ್ಮೇಗೌಡ (92) ರವರು ಇಂದು ವಯೋಸಹಜವಾಗಿ ಇಂದು ಬೆಂಗಳೂರಿನಲ್ಲಿ ನಿಧನ ಹೊಂದಿದರು. ಶ್ರೀಯುತರ ಪಾರ್ಥೀವ ಶರೀರವು ಇಂದು ಸಂಜೆ ಸ್ವಗ್ರಾಮಕ್ಕೆ ಆಗಮಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ : ಕಾಫಿನಾಡಿನಲ್ಲಿ ನವ ವಿವಾಹಿತೆಯ ಅನುಮಾನಾಸ್ಪದ ಸಾವು ಪತಿಯೊಂದಿಗೆ ರಾತ್ರಿ ಇಡೀ ಕಾಡಿನಲ್ಲಿದ್ದ ಪತ್ನಿ ಬೆಳಗಾಗುವಷ್ಟರಲ್ಲಿ ಶವ
ದಿನಾಂಕ 30.01.2022 ರ ಬೆಳಗ್ಗೆ 06 ಗಂಟೆಯಿಂದ 11.30 ರ ವರೆಗೆ ಅಂತಿಮ ದರ್ಶನದ ವ್ಯವಸ್ಥೆಯನ್ನು ಆಲ್ದೂರಿನಲ್ಲಿ ಕಲ್ಪಿಸಲಾಗಿದೆ ಹಾಗೂ ಅಂತ್ಯ ಸಂಸ್ಕಾರವು ಆಲ್ದೂರಿನಲ್ಲೇ ನಡೆಯಲಿದೆ ಎಂಬ ಮಾಹಿತಿ ದೊರೆತಿದೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಅನೇಕರು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.

0 Comments