ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಮನೆಯಲ್ಲಿ  ಯಾರು ಇಲ್ಲದ ವೇಳೆ ಬಾಗಿಲಿನ ಬೀಗ ಮುರಿದು ಒಳ ಹೊಕ್ಕಿದ ಕಳ್ಳರು ಮನೆಗೆ ನುಗ್ಗಿ ಕನ್ನ ಹಾಕಿದ ಪ್ರಕರಣ ಬೆಳಕಿಗೆ ಬಂದಿದೆ. 

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಅಗಳಗಂಡಿ ನಿವಾಸಿ ಸದಾನಂದ ಎಂಬುವವರ ಮನೆಗೆ ಕಳ್ಳರು ನುಗ್ಗಿ ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ ಎಂದು ತಿಳಿದುಬಂದಿದೆ. ಮನೆಯವರು ಯಾರೂ ಇಲ್ಲದ ಸಮಯವನ್ನು ನೋಡಿಕೊಂಡು ಕಳ್ಳರು ಮನೆಗೆ ನುಗ್ಗಿ ಮುಂಬಾಗಿಲ ಬೀಗವನ್ನು ಕಬ್ಬಿಣದ ರಾಡ್ ನಿಂದ ಒಡೆದು ಒಳನುಗ್ಗಿ ಕಳ್ಳತನ ಎಸಗಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಘಟನೆಯ ಕುರಿತಾಗಿ ಸಂಬಂಧಿಕರು ಸದಾನಂದ ಅವರಿಗೆ ತಿಳಿಸಿದ ಕೂಡಲೇ ಸ್ಥಳಕ್ಕಾಗಮಿಸಿ ಸದಾನಂದ ಅವರು ನೋಡಿದ್ದಾರೆ, ಮನೆಯ ಗಾಡ್ರೇಜ್ ಬೀರುವಿನಲ್ಲಿರಿಸಿದ್ದ 24,000 ಮೌಲ್ಯದ 6 ಗ್ರಾಂ ತೂಕದ ಬಂಗಾರದ ಚೈನ್, ಬಂಗಾರದ ಓಲೆ, ಮೂರು ಬಂಗಾರದ ಉಂಗುರಗಳು, ಎರಡು ಸಾವಿರ ರೂ ನಗದು ಸೇರಿದಂತೆ ಒಟ್ಟಾರೆ 82000 ಮೌಲ್ಯದ ಸ್ವತ್ತುಗಳನ್ನು ಕಳ್ಳರು ದೋಚಿದ್ದಾರೆ ಎಂದು ತಿಳಿದುಬಂದಿದೆ. 

ಶೃಂಗೇರಿ : ಕೊಳೆತ ಸ್ಥಿತಿಯಲ್ಲಿ ದೊರೆತ ವ್ಯಕ್ತಿಯ ಶವ ; ಕೊಲೆ ಶಂಕೆ ಶಂಕರಾಚಾರ್ಯರ ಪ್ರತಿಮೆಗೆ ಹಸಿರು ಶಾಲು ಹಾಕಿ ವಿವಾದಕ್ಕೆ ಕಾರಣವಾಗಿದ್ದ ವ್ಯಕ್ತಿ

ಆದಷ್ಟು ಶೀಘ್ರವಾಗಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಕಳ್ಳರನ್ನು ಪತ್ತೆ ಮಾಡಿ ನ್ಯಾಯ ದೊರಕಿಸಬೇಕೆಂದು ಕುಟುಂಬಸ್ಥರು ಕೋರಿದ್ದಾರೆ. ಈ ಕುರಿತು ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅಗಳಗಂಡಿ ಸದಾನಂದ ಅವರ ಮನೆಯ ಸಮೀಪದ ನಿವಾಸಿಗಳಾದ ಗಿರಿಜಾ ಎಂಬುವವರ ಮನೆಗೂ ಕನ್ನ ಹಾಕಿರುವ ಕಳ್ಳರು ಕೈಚಳಕ ತೋರಿಸಿದ್ದಾರೆ. ಮನೆಯಲ್ಲಿ ಇಟ್ಟಿದ್ದ ಸ್ತ್ರೀ ಶಕ್ತಿ ಸಂಘದ ಹಣ ಕೂಲಿ ಮಾಡಿ ಸಂಪಾದನೆ ಮಾಡಿದ್ದ ಹಣವನ್ನು ಕೂಡ ಕಳ್ಳರು ದೋಚಿದ್ದಾರೆ ಎಂದು ತಿಳಿದುಬಂದಿದೆ. 

ಮನೆಯ ಬಾಗಿಲಿನಲ್ಲಿದ್ದ ಬೀಗವನ್ನು ಒಡೆದು ಮನೆಯನ್ನು ಕಳ್ಳರು ದೋಚಿದ್ದಾರೆ. ಈ ಕುರಿತಾಗಿ ಮನೆಯವರು ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.