ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಅಕ್ರಮವಾಗಿ ಕಾಪರ್ ವೈರ್ ಗಳನ್ನು ಮನೆಯಲ್ಲಿ ಸಂಗ್ರಹಣೆ ಮಾಡಿದ್ದ ಸಹಾಯಕ ಇಂಜಿನಿಯರ್ ಹಾಗೂ ಮೇಲ್ವಿಚಾರಕನನ್ನು ಅಮಾನತು ಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಚಿಕ್ಕಮಗಳೂರು ನಗರದ ನಿವಾಸಿ ಗಂಗಾಧರ್ ರವರ ಮನೆಗೆ ಕೆಲ ದಿನಗಳ ಹಿಂದೆ ಮೆಸ್ಕಾಂ ಜಾಗೃತ ದಳದ ಅಧಿಕಾರಿಗಳು ದಾಳಿ ನಡೆಸಿದ್ದರು ಈ ಸಂದರ್ಭದಲ್ಲಿ ಅವರ ಮನೆಯನ್ನು ಪರಿಶೀಲನೆ ನಡೆಸಿದಾಗ ಹಲವು ಬಗೆಯ ಕಾಪರ್ ವೈರ್ ಗಳು ಮನೆಯಲ್ಲಿ ಇರುವುದು ಕಂಡು ಬಂದಿತ್ತು, ಈ ಹಿನ್ನೆಲೆ ಆಲ್ದೂರು ಶಾಖೆಯ ಸಹಾಯಕ ಇಂಜಿನಿಯರ್ ಶಾಂತಪ್ಪ ಹಾಗೂ ಮೇಲ್ವಿಚಾರಕ ಗಂಗಾಧರ್ ಅವರನ್ನು ಅಮಾನತು ಮಾಡಿ ಚಿಕ್ಕಮಗಳೂರು ವೃತ್ತದ ಮೆಸ್ಕಾಂ ಶಿಸ್ತುಪಾಲನಾ ಪ್ರಾಧಿಕಾರದ ಅಧೀಕ್ಷಕ ಎಂಜಿನಿಯರ್ ಅವರು ಆದೇಶಿಸಿದ್ದಾರೆ.

ಈ ಹಿಂದೆ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಮನೆಯ ಮುಂಭಾಗದಲ್ಲಿ ಹಾಗೂ ಹಿಂಭಾಗದಲ್ಲಿ ಅನೇಕ ಕಾಪರ್ ವೈರ್ ಗಳನ್ನು ಸಂಗ್ರಹಿಸಿಡಲಾಗಿತ್ತು, ನಿಯಮಾವಳಿಗಳಿಗೆ ಇದು ವಿರುದ್ಧವಾಗಿದ್ದರೂ ಕೂಡ ಅಧಿಕಾರಿಗಳು ಜವಾಬ್ದಾರಿಯನ್ನು ತೋರದೆ ಈ ರೀತಿಯಾಗಿ ಸಂಗ್ರಹಣೆ ಮಾಡಿರುವುದು ಸರಿಯಲ್ಲ ನಿಯಮಾವಳಿಗಳು ಎಲ್ಲರಿಗೂ ಅನ್ವಯವಾಗುತ್ತದೆ ಅದನ್ನು ಮೀರಿದರೆ ಶಿಕ್ಷೆಗೆ ಒಳಪಡಬೇಕಾಗುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.

ಇದನ್ನೂ ಓದಿ : ಮಲೆನಾಡಿನ ಉದ್ಯೋಗದಾತ ವಿ.ಜಿ ಸಿದ್ದಾರ್ಥ್ ಹೆಗ್ಡೆ ಅವರಿಗೆ ತನ್ನ ಮದುವೆ ಸಮಾರಂಭದಲ್ಲೇ ನುಡಿನಮನ ಸಲ್ಲಿಸಿದ ಯುವಕ

ಅನಗತ್ಯವಾಗಿ ವೈರ್ ಗಳನ್ನು ಸಂಗ್ರಹಿಸಿದ ಕಾರಣ ಶಾಂತಪ್ಪ ಹಾಗೂ ಗಂಗಾಧರ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಮೆಸ್ಕಾಂ ಶಿಸ್ತುಪಾಲನಾ ಪ್ರಾಧಿಕಾರದ ಅಧೀಕ್ಷಕ ಎಂಜಿನಿಯರ್ ಆದೇಶ ಹೊರಡಿಸಿದ್ದಾರೆ.