ಕೊಡಗು : (ನ್ಯೂಸ್ ಮಲ್ನಾಡ್ ವರದಿ) ಲಂಚಕ್ಕಾಗಿ ಬೇಡಿಕೆಯಿಟ್ಟು ಹಣ ಪಡೆಯುವ ವೇಳೆ ಶಿರಸ್ತೇದಾರ್ ಓರ್ವನನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕು ಕಛೇರಿಗೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಶಿರಸ್ತೇದಾರ್ ವಿನೋದ್ ಎಂಬಾತನನ್ನು ಸೆರೆ ಹಿಡಿದಿದ್ದಾರೆ. ಫೈಲ್ ಒಂದನ್ನು ವರ್ಗಾವಣೆ ಮಾಡಲು ಶಿರಸ್ತೇದಾರ್ ವಿನೋದ್ ಎಂಬಾತ ಐವತ್ತು ಸಾವಿರ ರೂಪಾಯಿ ಹಣ ಬೇಡಿಕೆಯಿಟ್ಟಿದ್ದ. ಹಣವನ್ನು ನೀಡುವ ಸಲುವಾಗಿ ಅಧಿಕಾರಿಯನ್ನು ಕ್ಯಾಂಟೀನ್ ಸಮೀಪಕ್ಕೆ ಕರೆದು ಹಣ ಪಡೆಯುವ ಸಮಯದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ :
ಮಗುಚಿ ಬಿದ್ದ ಶಾಲಾ ಬಸ್ ಕೆಲವು ಮಕ್ಕಳಿಗೆ ಗಾಯ
ಈ ಸಂಬಂಧ ಎಸಿಬಿ ಅಧಿಕಾರಿಗಳು ಮಾಹಿತಿ ಪಡೆಯುತ್ತಿದ್ದು ಇನ್ನೂ ಹೆಚ್ಚಿನ ತನಿಖೆಯ ನಂತರ ಘಟನೆಯ ಕುರಿತಾದ ಸಂಪೂರ್ಣ ಮಾಹಿತಿ ದೊರೆಯಲಿದೆ.

0 Comments