ಶಿಕಾರಿಪುರ : (ನ್ಯೂಸ್ ಮಲ್ನಾಡ್ ವರದಿ) ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುವಂತೆ ಪತಿಯೇ ಪತ್ನಿಗೆ ಕಿರುಕುಳ ನೀಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಹಿಂದೂ ಧರ್ಮದವರಾದ ಸುರೇಶ್ ನಾಯ್ಕ ಹಾಗೂ ಕುಟುಂಬದವರು ಈ ಹಿಂದಿನಿಂದಲೂ ಹಿಂದೂ ಧರ್ಮದ ಅನುಸಾರ ಎಲ್ಲಾ ಆಚರಣೆಗಳನ್ನು ನಡೆಸಿಕೊಂಡು ಬರುತ್ತಿದ್ದರು ಆದರೆ ಕಳೆದ ಮೂರು ತಿಂಗಳುಗಳಿಂದ ಏಕಾಏಕಿ ನಿರಂತರವಾಗಿ ಪತಿಯು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗಬೇಕೆಂದು ತೀವ್ರ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಪತ್ನಿ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಪ್ರತಿದಿನ ಸಂಜೆಯ ಸಮಯದಲ್ಲಿ ಶಾಲೆಯಿಂದ ಬಂದ ಮಕ್ಕಳು ಓದಿಕೊಳ್ಳುತ್ತಾರೆ ಈ ಸಂದರ್ಭದಲ್ಲಿ ಪತಿ ಸುರೇಶ್ ನಾಯ್ಕ ರವರು ಬೈಬಲ್ ಓದಲು ಆರಂಭಿಸುತ್ತಾರೆ ಈ ಸಂದರ್ಭದಲ್ಲಿ ಮಕ್ಕಳಿಗೆ ಜೋರಾಗಿ ಓದದಂತೆ ಬರೆಯದಂತೆ ಮಕ್ಕಳಿಗೂ ಹಿಂಸೆ ನೀಡುತ್ತಿದ್ದಾರೆ ಹಾಗೂ ಮತಾಂತರವಾಗದೇ ಹೋದಲ್ಲಿ ತವರುಮನೆಗೆ ಹೋಗುವಂತೆ ಜೋರು ಮಾಡುತ್ತಾರೆ ಮೂವರು ಮಕ್ಕಳನ್ನು ಕರೆದುಕೊಂಡು ನಾನೊಬ್ಬ ಮಹಿಳೆಯಾಗಿ ಎತ್ತ ಹೋಗುವುದು ಎಂದು ಮಹಿಳೆ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ ಹಾಗೂ ಆದಷ್ಟು ಶೀಘ್ರವಾಗಿ ಈ ಸಮಸ್ಯೆಯನ್ನು ಪರಿಹರಿಸುವಂತೆ ಕೋರಿದ್ದಾರೆ. 

ಇದನ್ನೂ ಓದಿ : ಮನೆಯಲ್ಲಿದ್ದ ಚಿನ್ನಾಭರಣ ಹಣ ದೋಚಿದ್ದ ಖದೀಮ ಅಂದರ್; ಕಾಫಿನಾಡಿನ ಪೊಲೀಸರ ಯಶಸ್ವಿ ಕಾರ್ಯಾಚರಣೆ

ಆಮಿಷದ ಮತಾಂತರದ ಕುರಿತಾಗಿ ಗಂಭೀರ ಆರೋಪ :

ಮತಾಂತರಗೊಂಡಿರುವ ಸುರೇಶ್ ನಾಯ್ಕ ಅವರು ಈ ಹಿಂದೆ ಮರಿಯಮ್ಮ ದೇವಸ್ಥಾನದ ಪೂಜಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು ಆದರೆ ಆಮಿಷಕ್ಕೆ ಒಳಗಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡು ಕ್ರಿಶ್ಚಿಯನ್ ಆಚರಣೆಗಳನ್ನು ಮಾಡುತ್ತಿದ್ದಾರೆ ಇದು ಅತ್ಯಂತ ಶೋಚನೀಯ ಎಂದು ಸಂಬಂಧಿಕರು ತಿಳಿಸಿದ್ದಾರೆ. 

ಈ ರೀತಿಯ ಮತಾಂತರದ ಕುರಿತಾಗಿ ಆಕ್ರೋಶ ವ್ಯಕ್ತಪಡಿಸಿರುವ ಸಾರ್ವಜನಿಕರು ವ್ಯವಸ್ಥಿತವಾಗಿ ಹಣಕ್ಕೆ ಆಮಿಷವೊಡ್ಡಿ ಮತಾಂತರ ಮಾಡುವ ವ್ಯವಸ್ಥಿತ ಜಾಲ ಜಿಲ್ಲೆಯಲ್ಲಿ ಇರುವ ಸಂಶಯ ಉಂಟಾಗಿದೆ, ಪೂಜಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿ ಬೈಬಲ್ ಓದಲು ಆರಂಭಮಾಡಿರುವುದು ಗೊಂದಲಕ್ಕೀಡುಮಾಡಿದೆ ಈ ಕುರಿತು ಸಮಗ್ರ ತನಿಖೆನಡೆಸಿ ಮಕ್ಕಳಿಗೆ ಹಾಗೂ ಪತ್ನಿಗೆ ನ್ಯಾಯ ಒದಗಿಸಬೇಕೆಂದು ಕುಟುಂಬಸ್ಥರು ಹಾಗೂ ಸಾರ್ವಜನಿಕರು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.