ಭದ್ರಾವತಿ : (ನ್ಯೂಸ್ ಮಲ್ನಾಡ್ ವರದಿ) ಭದ್ರಾವತಿಯ ಸಾಮಿಲ್ ಒಂದಕ್ಕೆ ಬೆಂಕಿ ತಗುಲಿ ಇಡೀ ಸಾಮಿಲ್ ಹೊತ್ತಿ ಉರಿದಿದೆ. ಈ ಭೀಕರ ಅಗ್ನಿ ಅವಘಡವು ಬಹಳಷ್ಟು ನಷ್ಟವನ್ನುಂಟುಮಾಡಿದೆ. ಎಂಟು ಗಂಟೆಗಳ ಕಾಲ ಅಗ್ನಿಶಾಮಕದಳದ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಪ್ರಯತ್ನ ಪಟ್ಟದ್ದಾರೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಹೊಸ ಸೇತುವೆ ರಸ್ತೆಯಲ್ಲಿರುವ ಮಂಜುನಾಥ ಸಾಮಿಲ್ ನಲ್ಲಿ ಈ ದುರ್ಘಟನೆ ಸಂಭವಿಸಿದ್ದು ಸಾಮಿಲ್ ಸೇರಿದಂತೆ ಅಕ್ಕಪಕ್ಕದ ಅಂಗಡಿ ಆಸ್ತಿಪಾಸ್ತಿಗಳಿಗೂ ಹಾನಿಯಾಗಿದೆ. ರಾತ್ರಿ 11 ಗಂಟೆಯ ಸುಮಾರಿಗೆ ಬೆಂಕಿ ತಗುಲಿದ್ದು ತೀವ್ರವಾಗಿ ಬೆಂಕಿ ಎಲ್ಲೆಡೆ ವ್ಯಾಪಿಸಿದೆ. ಬೆಂಕಿಯನ್ನು ನಂದಿಸುವ ಸಲುವಾಗಿ ಅಗ್ನಿಶಾಮಕದಳದ ಸಿಬ್ಬಂದಿಗಳು ಬಹಳಷ್ಟು ಶ್ರಮ ವಹಿಸುತ್ತಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಆ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಹಕ್ಕುಪತ್ರ ಹಗರಣ, ಎಸಿಬಿ ದಾಳಿ: ಶೃಂಗೇರಿ ತಹಸೀಲ್ದಾರ್ ಅಂಬುಜಾ, ಗ್ರಾಮ ಲೆಕ್ಕಾಧಿಕಾರಿ ಸಿದ್ದಪ್ಪ ಬಂಧನ.
ಸ್ಥಳದಲ್ಲಿದ್ದ ಕೋಟ್ಯಂತರ ರೂಪಾಯಿ ಬೆಲೆಬಾಳುವ ನಾಟಗಳು ನಾಶವಾಗಿದೆ. ಘಟನಾ ಸ್ಥಳದಲ್ಲಿ ಆರೋಗ್ಯ ಇಲಾಖೆಯ ಆಂಬುಲೆನ್ಸ್ ಹಾಗೂ ಇನ್ನಿತರ ಅಗತ್ಯ ಪರಿಕರಗಳನ್ನು ನಿಯೋಜಿಸಲಾಗಿದೆ ಎಂಬ ಮಾಹಿತಿ ದೊರೆತಿದೆ.
ಅಗ್ನಿ ಅವಘಡ ಸಂಭವಿಸಿದ ಕೂಡಲೇ ಎರಡು ಅಗ್ನಿಶಾಮಕದಳದ ವಾಹನ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಕಾರ್ಯ ಪ್ರವೃತ್ತರಗಿದ್ದಾರೆ. ಬೆಂಕಿಯ ತೀವ್ರತೆ ಹೆಚ್ಚಾದ ಪರಿಣಾಮ ಅಕ್ಕಪಕ್ಕದ ಕೆಲ ಸ್ಥಳಗಳಿಗೂ ಬೆಂಕಿ ವ್ಯಾಪಿಸಿದೆ, ಬೆಂಕಿಯ ತೀವ್ರತೆ ಕಡಿಮೆ ಮಾಡುವ ಸಲುವಾಗಿ ಹೆಚ್ಚುವರಿ ಒಂಬತ್ತು ವಾಹನಗಳನ್ನು ಸ್ಥಳಕ್ಕೆ ತರಿಸಿ ಬೆಂಕಿ ನಂದಿಸಲಾಗುತ್ತಿದೆ ಎಂದು ಅಗ್ನಿಶಾಮಕದಳದ ಅಧಿಕಾರಿಗಳು ತಿಳಿಸಿದ್ದಾರೆ.

0 Comments