ನರಸಿಂಹರಾಜಪುರ : (ನ್ಯೂಸ್ ಮಲ್ನಾಡ್ ವರದಿ) ರೈತರಿಗೆ ಹಾಗೂ ಬಡವರಿಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್ ಜೀವರಾಜ್ ಅವರಿಂದಾಗಿ ಹಕ್ಕುಪತ್ರ ದೊರೆತಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಕೆ.ಪಿ ಅಂಶುಮಂತ್ ಆರೋಪಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಕೆ.ಪಿ ಅಂಶುಮಂತ್ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಹದಿನೈದು ವರ್ಷಗಳ ಕಾಲ ಶಾಸಕರಾಗಿ ಕಾರ್ಯ ನಿರ್ವಹಿಸಿದವರು ಪ್ರತೀ ತಾಲೂಕಿನಲ್ಲೂ ಅಕ್ರಮ ಸಕ್ರಮ ಸಮಿತಿ ರಚಿಸಬಹುದಿತ್ತು ಆದರೆ ಅದನ್ನು ಮಾಡಿಲ್ಲ, ಜನವಿರೋಧಿ ನೀತಿ ಮಾಡುತ್ತಿದ್ದಾರೆ ಇದನ್ನು ಕೂಡಲೇ ನಿಲ್ಲಿಸಿ ಅಧಿಕಾರಕ್ಕಾಗಿ ಹಸ್ತಕ್ಷೇಪ ಮಾಡುವುದನ್ನು ಮೊದಲು ಬಿಟ್ಟು ಜನರ ಒಳಿತಿಗಾಗಿ ಯೋಚಿಸಬೇಕು ಎಂದರು. 

ಇದನ್ನೂ ಓದಿ : ವೀಕೆಂಡ್ ಕರ್ಫ್ಯೂ ಕುರಿತಾಗಿ ನಿಯಮಾವಳಿ ಹೊರಡಿಸಿದ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ ಎನ್ ರಮೇಶ್.

ಮಾಜಿ ಶಾಸಕರು ಕೇವಲ ಅಪ ಪ್ರಚಾರಗಳನ್ನು ಮಾಡುತ್ತಿದ್ದಾರೆ ಮೊದಲು ಅದನ್ನು ನಿಲ್ಲಿಸಿ ಜನಪರವಾದ ಉತ್ತಮ ಕಾರ್ಯಗಳಿಗೆ ಮುಂದೆ ಬರಬೇಕು ಎಂದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಕೆರೆಕಟ್ಟೆ ಮಾರ್ಗವನ್ನು ವಿಸ್ತರಿಸಲು ಅಗತ್ಯವಿರುವ ಎಲ್ಲಾ ಕ್ರಮ ತೆಗೆದುಕೊಳ್ಳುತ್ತೇನೆ ಎಂದಿದ್ದರು ಆದರೆ ಅವೆಲ್ಲವೂ ಈಗ ಹುಸಿಯಾಗಿದೆ. ಈ ಕುರಿತು ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು. 

ಮಲೆನಾಡು ಭಾಗದ ರೈತರು ಹಕ್ಕುಪತ್ರ ಪಡೆಯುವ ಮುನ್ನ ಅರಣ್ಯ ಇಲಾಖೆಯ ಅಭಿಪ್ರಾಯ ಪಡೆಯಲು ಆದೇಶಿಸಿದ್ದು ಜಿಲ್ಲಾಧಿಕಾರಿಗಳು ಈ ರೀತಿಯಾಗಿ ಜನ ವಿರೋಧಿನೀತಿಗಳನ್ನು ಜಾರಿಗೆ ತಂದಿರುವುದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಿಗೆ ಗೊತ್ತಿಲ್ಲವೇ ಇದನ್ನು ತಡೆಯುವಲ್ಲಿ ಗಮನವಹಿಸಬೇಕೆ ಹೊರತು ಅಧಿಕಾರಕ್ಕಾಗಿ ಅಲ್ಲ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಈ.ಸಿ ಜೋಯಿ, ಜಿ.ಎಂ ನಟರಾಜ್, ಜುಬೇದಾ, ಸುನೀಲ್ ಕುಮಾರ್ ಹಾಗೂ ಇನ್ನಿತರ ಕಾಂಗ್ರೆಸ್ ಮುಖಂಡರು ಹಾಗೂ ಇನ್ನಿತರರಿದ್ದರು.