ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಸಮರ್ಪಣಾ ಚಾರಿಟೆಬಲ್ ಟ್ರಸ್ಟ್ ಮೂಲಕ ಹಾಗೂ ಬ್ಲ್ಯೂ ಯೆಂಡರ್ ಕಂಪನಿ ವತಿಯಿಂದ ಸರ್ಕಾರಿ ಶಾಲೆಯ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯ ಉದ್ಧೇಶದಿಂದ ಲ್ಯಾಪ್ ಟಾಪ್ ಅನ್ನು ಕೊಡುಗೆಯಾಗಿ ನೀಡಲಾಯಿತು.
ಪ್ರಸ್ತುತ ಕಂಪ್ಯೂಟರ್ ಯುಗವಾಗಿದ್ದು ಸ್ಪರ್ಧಾತ್ಮಕ ಯುಗದಲ್ಲಿ ಕಂಪ್ಯೂಟರ್ ಶಿಕ್ಷಣ ಅನಿವಾರ್ಯವಾಗಿದೆ, ಹಾಗೆಯೇ ಆನ್ಲೈನ್ ಶಿಕ್ಷಣ ವ್ಯವಸ್ಥೆ ಜಾರಿಯಲ್ಲಿರುವುದರಿಂದ ತರಗತಿ ನಡೆಸಲು ಶಾಲೆಗಳಿಗೆ ಕಂಪ್ಯೂಟರ್ ಅವಶ್ಯಕತೆ ತೀರಾ ಇದೆ. ಈ ಕಾರಣದಿಂದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಸೌಲಭ್ಯಗಳ ಕೊರತೆಯಿಂದ ಕಲಿಕೆಯಲ್ಲಿ ಹಿಂದೆ ಬೀಳಬಾರದು ಎಂಬ ಸದುಧ್ದೇಶದಿಂದ ಶಾಲೆಗಳಿಗೆ ಲ್ಯಾಪ್ ಟಾಪ್ ನೀಡಲಾಯಿತು.
ಪಟ್ಟಣದ ಬಾಲಕಿಯರ ಪ್ರಾಥಮಿಕ ಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗಂಡಘಟ್ಟ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಸಿಗೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಂಚಿನಗರ, ಸರ್ಕಾರಿ ಪ್ರೌಢಶಾಲೆ ಹೊಳೆಕೊಪ್ಪ, ಮೆಣಸೆ ಸರ್ಕಾರಿ ಪದವಿ ಕಾಲೇಜಿಗೆ ನೀಡಲಾಯಿತು.
ಇದನ್ನೂ ಓದಿ : ಶೃಂಗೇರಿಯಲ್ಲಿ ಭೀಕರ ಸರಣಿ ಅಪಘಾತ; ಓರ್ವ ಸಾವು, ಹಲವರು ಆಸ್ಪತ್ರೆಗೆ ದಾಖಲು
ಜಿಲ್ಲೆಯಲ್ಲಿ ಮೂಡಿಗೆರೆ, ಕಳಸ, ಸಂಸೆ, ನಿಡುವಾಳೆ, ಬಾಳೆಹೊನ್ನೂರು, ಜಯಪುರ, ಲೋಕನಾಥಪುರ, ನರಸಿಂಹ ರಾಜಪುರ, ಮುತ್ತಿನಕೊಪ್ಪ, ಕೊಪ್ಪ, ಶೃಂಗೇರಿ ಭಾಗಗಳಲ್ಲಿ ಒಟ್ಟು ಸುಮಾರು 25 ಲ್ಯಾಪ್ಟಾಪ್ ವಿತರಿಸಲಾಗಿದೆ.
ಈ ಹಿಂದೆ ಕೊರೋನಾ ಸಮಯದಲ್ಲಿ ಟ್ರಸ್ಟ್ ನ ವತಿಯಿಂದ ಜಿಲ್ಲೆಯ ಹಲವು ಭಾಗಗಳಲ್ಲಿ ಹಾಗೂ ಶೃಂಗೇರಿಯಲ್ಲಿ ಫುಡ್ ಕಿಟ್ ವಿತರಣೆ ಮಾಡಲಾಗಿತ್ತು ಹಾಗೂ ಬ್ಲೂ ಯೆಂಡರ್ ಕಂಪನಿಯ ಸಹಯೋಗದೊಂದಿಗೆ ಆಸ್ಪತ್ರೆ ಗಳಿಗೆ 14ಲಕ್ಷ ವೆಚ್ಚದಲ್ಲಿ ಆಮ್ಲಜನಕ ಸಾಂಧ್ರಕ ವಿತರಿಸಲಾಗಿತ್ತು.
ಟ್ರಸ್ಟ್ ನ ಸದಸ್ಯರಾದ ದೀಪಾ ಶೆಟ್ಟಿ, ಸತೀಶ್ ಜೈನ್, ವಿಜಯ್ ನಾಗೇಶ್, ರಚನ್ ಮಾಗುಂಡಿ, ಸಂದೀಪ್ ಶೆಟ್ಟಿ, ರಮ್ಯಾ ಶೆಟ್ಟಿ, ಸತೀಶ್ ಜೈನ್, ರಂಜಿತ್ ಶೃಂಗೇರಿ, ಆದರ್ಶ ಕಾಂಚಿನಗರ, ಅಖಿಲ್ ಶೆಟ್ಟಿ ಇದ್ದರು

0 Comments