ಕೊಡಗು : (ನ್ಯೂಸ್ ಮಲ್ನಾಡ್ ವರದಿ) ವಿರಾಜಪೇಟೆ ಶಾಸಕ ಕೆಜಿ ಬೋಪಯ್ಯ ಅವರಿಗೆ ಈ ಹಿಂದೆ ಹಣಕ್ಕಾಗಿ ಬೇಡಿಕೆ ಇಟ್ಟು ಬ್ಲ್ಯಾಕ್ ಮೇಲ್ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಾಜಿ ಸ್ಪೀಕರ್ ಪ್ರಸ್ತುತ ವಿರಾಜಪೇಟೆ ಶಾಸಕರಾದ ಕೆಜಿ ಬೋಪಯ್ಯ ಅವರಿಗೆ ಕಳೆದ ಕೆಲ ದಿನಗಳ ಹಿಂದೆ ಕರೆ ಮಾಡಿ ನಿಮ್ಮ ಮನೆಗೆ ಎಸಿಬಿ ರೇಡ್ ಆಗುತ್ತದೆ ಆಗಬಾರದು ಎಂದಾದರೆ ಒಂದು ಕೋಟಿ ಹಣ ನೀಡಬೇಕು ಎಂದು ಎರಡು ಬಾರಿ ಕರೆ ಮಾಡಿದ್ದನು ಆದರೆ ಕರೆ ಸ್ವೀಕರಿಸಿದ್ದ ಕೆ. ಜಿ. ಬೋಪಯ್ಯ ಅವರು ಖಡಕ್ ಆಗಿಯೇ ಉತ್ತರ ನೀಡಿದ್ದರು, ಕೆ.ಜಿ ಬೋಪಯ್ಯ ಅವರು ತನಗೆ ಯಾವುದೇ ಭಯ ಇಲ್ಲ, ರೇಡ್ ಮಾಡುವಂತೆ ತಿಳಿಸಿದ್ದರು ನಂತರದಲ್ಲಿ ಈ ಕುರಿತು ಸಿ.ಎಂ ಹಾಗೂ ಡಿ.ಜಿ ಅವರಿಗೆ ತಿಳಿಸಿದ್ದರು.

ನಂತರದಲ್ಲಿ ಈ ಕುರಿತು ಮಾಹಿತಿ ಪಡೆದ ಪೊಲೀಸರು ತನಿಖೆ ಆರಂಭಿಸಿದ್ದರು ಕರೆ ಮಾಡಿದ ಆರೋಪಿ ನಂತರದಲ್ಲಿ ಆಂಧ್ರಕ್ಕೆ ತೆರಳಿದ್ದ. ಆರೋಪಿಯನ್ನು ಆನಂದ್ ಎಂದು ಗುರುತಿಸಲಾಗಿದೆ, ಈತ ಓರ್ವ ರೌಡಿ ಶೀಟರ್ ಆಗಿದ್ದು ಈತನನ್ನು ಬೆಂಗಳೂರಿನಲ್ಲಿ ಸೆರೆ ಹಿಡಿಯಲಾಗಿದೆ. ಆರೋಪಿಯನ್ನು ತನಿಖೆ ನಡೆಸಿದ ಬಳಿಕವಷ್ಟೇ ಆತನ ಹಿಂದಿರುವವರ ಕುರಿತು ಮಾಹಿತಿ ದೊರೆಯಬೇಕಿದೆ.