ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿ ವಿಡಿಯೋ ಚಿತ್ರೀಕರಿಸಿ ಎಲ್ಲೆಡೆ ಹರಿಬಿಟ್ಟಿದ್ದ ಇಬ್ಬರು ಕಾಮುಕರನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗದ ಹೊಸ ನಗರದಲ್ಲಿ ಊರಿಗೆ ತೆರಳಲು ಬಸ್ಸಿಗಾಗಿ ಯುವತಿಯು ಕಾಯುತ್ತಿದ್ದಾಗ ಆಕೆಗೆ ಪರಿಚಯಸ್ಥರೇ ಆದ ಸುನೀಲ್ ಹಾಗೂ ಸಂತೋಷ್ ಎಂಬ ಇಬ್ಬರು ಆಕೆಯ ಬಳಿ ತೆರಳಿ ನಾವು ಊರಿನ ಕಡೆಗೇ ತೆರಳುತ್ತಿದ್ದೇವೆ ನಮ್ಮೊಂದಿಗೆ ಬಾ ನಿನ್ನನು ಊರಿಗೆ ಬಿಡುತ್ತೇವೆ ಎಂದು ಪುಸಲಾಯಿಸಿ ಆಕೆಯನ್ನು ಕಾರಿನಲ್ಲಿ ಕೂರಿಸಿಕೊಂಡು ಊರಿಗೆ ತೆರಳದೆ ತಮ್ಮ ರೂಮಿಗೆ ಕರೆದುಕೊಂಡು ಹೋಗಿ ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಹಾಗೂ ಆ ದೃಶ್ಯಾವಳಿಗಳನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದುಕೊಂಡು ಯಾರಿಗೂ ಈ ಕುರಿತು ಹೇಳದಂತೆ ಬೆದರಿಸಿದ್ದಾರೆ. 

ಇದನ್ನೂ ಓದಿ :ಕಾಫಿನಾಡಿನಲ್ಲಿ ಭೀಕರ ಅಗ್ನಿ ಅವಘಡ; ಹೊತ್ತಿ ಉರಿದ ಮೂರು ಎಕರೆ ಅಡಿಕೆ ತೋಟ

ಕೆಲ ದಿನಗಳು ಕಳೆದ ಬಳಿಕ ಮತ್ತೆ ಬಾಲಕಿಯನ್ನು ರೂಂ ಗೆ ಬರುವಂತೆ ಒತ್ತಾಯಿಸಿದ್ದಾರೆ ಬಾಲಕಿ ಒಪ್ಪದೇ ಇದ್ದುದಕ್ಕೆ ಮೊದಲೇ ತಾವು ರೆಕಾರ್ಡ್ ಮಾಡಿ ಕೊಂಡಿದ್ದ ವಿಡಿಯೋ ತುಣುಕುಗಳನ್ನು ಇತರರಿಗೆ ವಾಟ್ಸಾಪ್ನಲ್ಲಿ ಶೇರ್ ಮಾಡಿದ್ದಾರೆ ಇದನ್ನು ತಿಳಿದ ಬಾಲಕಿ ಮನನೊಂದು ವಿಚಾರವನ್ನು ಆಕೆಯ ಪೋಷಕರಿಗೆ ತಿಳಿಸಿ ಹೊಸನಗರ ಠಾಣೆಗೆ ದೂರು ನೀಡಿದ್ದಾಳೆ.

ಬಾಲಕಿ ನೀಡಿದ ದೂರಿನ ಮೇರೆಗೆ ಪೋಕ್ಸೋ ಕಾಯ್ದೆಯಡಿ ಹೊಸನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಾದ ಸಂತೋಷ್ ಹಾಗೂ ಸುನೀಲ್ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. 

ಅತ್ಯಾಚಾರ ಎಸಗುವವರ ವಿರುದ್ದ ಕಠಿಣ ಕಾನೂನು ಕ್ರಮಗಳು ಜಾರಿಯಲ್ಲಿದ್ದರೂ ಕೂಡ ಯಾವುದೇ ಭಯವಿಲ್ಲದೇ ನಿರಾತಂಕವಾಗಿ ಈ ರೀತಿಯ ಕೃತ್ಯ ಎಸಗುತ್ತಿರುವ ಆರೋಪಿಗಳಿಗೆ ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆ ಜಾರಿಯಾಗಬೇಕು ಅದರೊಂದಿಗೆ ನೊಂದವರಿಗೆ ಸೂಕ್ತ ರೀತಿಯ ಪರಿಹಾರ ಒದಗಿಸಬೇಕೆಂದು ಸಾರ್ವಜನಿಕರು ಕೋರಿದ್ದಾರೆ.