ನರಸಿಂಹರಾಜಪುರ : (ನ್ಯೂಸ್ ಮಲ್ನಾಡ್ ವರದಿ)ಇತ್ತೀಚಿನ ದಿನಗಳಲ್ಲಿ ಮದ್ಯಪಾನ ಮಾಡಿಕೊಂಡು ಕ್ಷುಲ್ಲಕ ಕಾರಣಕ್ಕೆ ಹತ್ಯೆ ಮಾಡುತ್ತಿರುವುದು ಹೆಚ್ಚಾಗಿ ಕಂಡು ಬರುತ್ತಿದೆ ಅಂತೆಯೇ ಕುಡಿದ ಮತ್ತಿನಲ್ಲಿ ತನ್ನ ಅತ್ತೆಯನ್ನೇ ಅಳಿಯ ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. 

ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಆಡುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಚ್ಚಬ್ಬಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ, ಕುಡಿದ ಮತ್ತಿನಲ್ಲಿ ಮೊದಲು ಹೆಂಡತಿಗೆ ಕುಡುಕ ರಮೇಶ್ ಹಲ್ಲೆ ನಡೆಸಿರುತ್ತಾನೆ ಜಗಳವನ್ನು ಬಿಡಿಸಲು ಬಂದ ಹೆಂಡತಿ ಮಂಜುಳಾ ಅವರ ತಾಯಿಗೂ ಕೂಡ ಹೊಡೆದಿರುತ್ತಾನೆ ನಂತರ ತಾಯಿಯನ್ನು ಸಂತೈಸಿ ಅವರಿಗೆ ಮಾತ್ರೆ ನೀಡಿ ಮಗಳು ಮಲಗಿಸಿರುತ್ತಾರೆ ಮುಂಜಾನೆ ಮಲಗಿದ್ದ ಕಾಳಮ್ಮ ಅವರನ್ನು ಎಬ್ಬಿಸಲು ಹೋದಾಗ ಅವರು ಮೃತಪಟ್ಟಿರುವುದು ಮಗಳಿಗೆ ಗೊತ್ತಾಗಿರುತ್ತದೆ ಇದನ್ನು ತಿಳಿದ ಅಳಿಯ ರಮೇಶ್ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.

ಮೃತಪಟ್ಟ ಮಹಿಳೆಯನ್ನು ಕಾಳಮ್ಮ ಎಂದು ಗುರುತಿಸಲಾಗಿದೆ. ಭಾನುವಾರ ಅತ್ತೆಯ ಮೇಲೆ ಅಳಿಯ ಹಲ್ಲೆ ನಡೆಸಿದ್ದಾನೆ ಆದರೆ ಘಟನೆಯು ಸ್ವಲ್ಪ ತಡವಾಗಿ ಬೆಳಕಿಗೆ ಬಂದಿದ್ದು ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ. 

ಘಟನೆಯ ಕುರಿತಾಗಿ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಆರೋಪಿಯನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ ಎಂದು ತಿಳಿದುಬಂದಿದೆ.