ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಸಾಕಷ್ಟು ಸದ್ದು ಮಾಡಿದ್ದ ಶೃಂಗೇರಿ ಹಕ್ಕುಪತ್ರ ಹಗರಣವು ತನಿಖೆಯ ಹಂತದಲ್ಲಿದೆ, ಈ ನಡುವೆಯೇ ತಾಲೂಕು ಕಛೇರಿಯಲ್ಲಿ ಕಡತಗಳು ಕಳ್ಳತನವಾಗಿರುವ ಶಂಕೆ ವ್ಯಕ್ತವಾಗಿದೆ.

ಈ ಹಿಂದೆ ಇದ್ದ ತಹಸೀಲ್ದಾರ್ ಅಂಬುಜಾ ಅವರ ಲಾಕರ್ ನಲ್ಲಿ ಹಕ್ಕುಪತ್ರ ಸಂಬಂಧ ಹಲವು ಕಡತಗಳು ಇದ್ದವು, ಅದರ ಕೀ ಸಹ ಇದುವರೆಗೂ ಅಂಬುಜಾ ಅವರ ಕೈಯಲ್ಲೇ ಇತ್ತು. ಆದರೆ ನೆನ್ನೆ ಸಂಜೆ ಸಮಯದಲ್ಲಿ ಈಗಿನ ಗ್ರೇಡ್ 2 ತಹಸೀಲ್ದಾರ್ ಬಸವರಾಜ ಅವರು ಆಫೀಸಿನಲ್ಲಿ ಇಲ್ಲದ ಸಮಯ ನೋಡಿ ಲಾಕರ್ ಓಪನ್ ಮಾಡಿ ಬಹುಮುಖ್ಯ ಕಡತಗಳನ್ನು ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅಂಬುಜಾ ಅವರ ಕೈಯಲ್ಲಿ ಕೀ ಇರುವಾಗ ಇಲ್ಲಿ ಲಾಕರ್ ಓಪನ್ ಮಾಡಿದ್ದಾದರೂ ಯಾರು ?. ನಕಲಿ ಕೀ ಬಳಸಿ ಕಳ್ಳತನ ಮಾಡಲಾಗಿದೆಯೇ ?. ಇದರ ಹಿಂದೆ ಇರುವುದು ಯಾರು? ಈಗಿನ ತಹಸೀಲ್ದಾರ್ ಗೆ ಚಾರ್ಜ್ ನೀಡಿದ ನಂತರ ಈ ಕೃತ್ಯ ಮಾಡುವ ಮೂಲಕ ಇವರನ್ನು ಬಲಿಪಶು ಮಾಡಲಾಗುತ್ತಿದೆಯೇ? ಎಂಬ ಹತ್ತು ಹಲವು ಪ್ರಶ್ನೆ ಎದ್ದಿದ್ದು ನೆನ್ನೆ ರಾತ್ರಿ ಗ್ರೇಡ್2 ತಹಸೀಲ್ದಾರ್ ಬಸವರಾಜ ಅವರು ಪೊಲೀಸ್ ಠಾಣೆಗೆ ಮೌಖಿಕವಾಗಿ ಮಾಹಿತಿ ಸಹ ನೀಡಿದ್ದಾರೆ. ಇಂದು ದೂರು ದಾಖಲು ಮಾಡುವ ಸಾಧ್ಯತೆಯಿದೆ. ಕಛೇರಿ ಒಳಗಿನ ಕಳ್ಳರನ್ನು ಹಿಡಿಯಲು ಉನ್ನತ ಮಟ್ಟದ ತನಿಖೆಯ ಅವಶ್ಯಕತೆ ಇದೆ.

ಇದನ್ನೂ ಓದಿ : ಚಿಕ್ಕಮಗಳೂರಿನಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ; ಮೂವರು ಎಸ್ಕೇಪ್

ಸಿಸಿಟಿವಿ ದಾಖಲೆ ಲಭ್ಯವಿಲ್ಲ: ಈ ನಡುವೆ ತಾಲೂಕು ಕಛೇರಿ ಸಿಸಿಟಿವಿ ಕ್ಯಾಮೆರಾ ರೆಕಾರ್ಡ್ ಆಗಿರುವ ದಾಖಲೆ ಪರಿಶೀಲಿಸಿದ್ದು ಹಾರ್ಡ್ ಡಿಸ್ಕ್ ಸಂಪೂರ್ಣ ಖಾಲಿ ಇದೆ ಎಂಬ ಮಾಹಿತಿ ಲಭ್ಯವಾಗಿದ್ದು. ದಾಖಲೆಗಳನ್ನು ಸಹ ನಾಶ ಮಾಡಲಾಗಿದೆಯೇ ಎಂಬ ಗುಮಾನಿ ಸಹ ವ್ಯಕ್ತವಾಗಿದೆ.