ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ ತಾಲೂಕಿನ ಯುವತಿಯೋರ್ವಳನ್ನು ಮೂಡಿಗೆರೆಯ ಅನ್ಯಧರ್ಮೀಯ ಯುವಕನೊಬ್ಬ ಪುಸಲಾಯಿಸಿ ಆಕೆಯು ಆತನೊಂದಿಗೆ ಓಡಿ ಹೋದ ಘಟನೆ ಬೆಳಕಿಗೆ ಬಂದಿದೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕಿಗ್ಗಾದಲ್ಲಿ ಕೆಲಸದ ನಿಮಿತ್ತ ವಾಸವಿರುವ ಕುಟುಂಬವೊಂದರ ಹೆಣ್ಣು ಮಗಳು ಮೂಡಿಗೆರೆಯ ಜುನೈದ್ ಎಂಬ ಯುವಕನ ಜೊತೆಗೆ ಮನೆಬಿಟ್ಟು ಎಸ್ಕೇಪ್ ಆಗಿದ್ದಾಳೆ ಎಂಬ ವಿಚಾರವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆಕೆಯನ್ನು ಈ ಹಿಂದೆಯೇ ಶಿವಮೊಗ್ಗದಲ್ಲಿ ಹಿಂದೂವಿನ ಹೆಸರಿನಲ್ಲಿ ವಂಚಿಸಿದ್ದಾನೆ ಎಂದು ತಿಳಿದುಬಂದಿದೆ.

ಘಟನೆಯ ಕುರಿತಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಆರೋಪಿಯನ್ನು ಈ ಕೂಡಲೇ ಬಂಧಿಸಬೇಕು ಹಿಂದೂ ಕುಟುಂಬದ ಯುವತಿಯರು ಹಾಗೂ ಮಹಿಳೆಯರು ಈ ಕುರಿತು ಹೆಚ್ಚಿನ ನಿಗಾವಹಿಸಬೇಕು ಎಂಬ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಲಾಗುತ್ತಿದೆ. 

ಹಿಂದೂ ಪೊಷಕರು ತಮ್ಮ ಮಕ್ಕಳು ಕಾಲೇಜು, ಉದ್ಯೋಗ, ಮೊಬೈಲ್ಗಳಲ್ಲಿ ಅಥವ ಮನೆಯಿಂದ ಹೊರಗಡೆ ಯಾವ ರೀತಿ ಇದ್ದಾರೆ ಎನ್ನುವುದನ್ನು ಗಮನಿಸಬೇಕು, ಹಿಂದೂ ಸಹೋದರಿಯರೂ ಕೂಡ ಹೆಚ್ಚಿನ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮುಸಲ್ಮಾನ ಯುವಕರಿಂದ ದೂರವಿರಬೇಕು. ಸಾಮಾಜಿಕ ಜಾಲತಾಣ ಉಪಯೋಗ ಮಾಡುವಾಗ ಎಚ್ಚರ ವಹಿಸಬೇಕು. ಸರ್ಕಾರದ ಮಟ್ಟದಲ್ಲಿ ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು - ರವಿಸಂಜಯ್ ಪೂಜಾರಿ, ಬಜರಂಗದಳ ತಾಲೂಕು ಸಂಚಾಲಕ, ಶೃಂಗೇರಿ

ಜುನೈದ್ ವಿರುದ್ಧ ಠಾಣೆ ಮೆಟ್ಟಿಲೇರಿದ್ದ ಯುವತಿ:

ತಾನು ಶೃಂಗೇರಿಯಲ್ಲಿ ಕಾಲೇಜು ಓದುತ್ತಿದ್ದ ದಿನಗಳಲ್ಲಿ ಈತನ ಪರಿಚಯವಾಗಿದ್ದು, ಆನಂತರ ನಾವು ಶಿವಮೊಗ್ಗದಲ್ಲಿ ಬಾಡಿಗೆ ಮನೆಯಲ್ಲಿದ್ದೆವು. ಅಲ್ಲಿಗೆ ಆಗಾಗ ಜುನೈದ್ ಬರುತ್ತಿದ್ದು, ತನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಅಲ್ಲದೇ ಆತ ತನ್ನ ಹೆಸರು ಜಗನ್, ತಾನೊಬ್ಬ ಶೆಟ್ಟಿ ಜನಾಂಗಕ್ಕೆ ಸೇರಿದವನಾಗಿದ್ದೇನೆ ಎಂದು ಹೇಳಿಕೊಂಡಿದ್ದು, ಆತನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಈ ಹಿಂದೆ 2021ರ ಅಕ್ಟೋಬರ್ ವೇಳೆ ಯುವತಿ ಇದೇ ಜುನೈದ್ ವಿರುದ್ಧ ಶೃಂಗೇರಿ‌ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು.

ಇದನ್ನೂ ಓದಿ : ಶೃಂಗೇರಿಯಲ್ಲಿ ಭೀಕರ ಸರಣಿ ಅಪಘಾತ; ಓರ್ವ ಗಂಭೀರ, ಹಲವರು ಆಸ್ಪತ್ರೆಗೆ ದಾಖಲು

ಅತ್ಯಾಚಾರದ ಆರೋಪದಡಿ ಜೈಲು ಸೇರಿದ್ದ ಜುನೈದ್:

ಅಲ್ಲದೇ ಇದೇ ಯುವತಿ 2021ರ ಅಕ್ಟೋಬರ್ ತಿಂಗಳಿನಲ್ಲಿ ನೀಡಿದ ದೂರಿನ ಅನ್ವಯ ಪೊಲೀಸರು ಆರೋಪಿ ಜುನೈದ್ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಿ ಬಂಧಿಸಿದ್ದರು. ಕಳೆದ 2 ತಿಂಗಳಿನಿಂದ ಜೈಲಿನಲ್ಲಿದ್ದ ಆರೋಪಿ ಜುನೈದ್ ಕೆಲ ದಿನದ ಹಿಂದೆ ರಿಲೀಸ್ ಆಗಿದ್ದ. ಈಗ ಅದೇ ಆರೋಪಿ ಜುನೈದ್ ಜೊತೆ ಯುವತಿ ಪರಾರಿಯಾಗಿದ್ದಾಳೆ. ಇದರಿಂದಾಗಿ ಹಲವು ಅನುಮಾನಗಳು ಮೂಡುತ್ತಿವೆ.