ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಟ್ರಾವೆಲರ್ ವಾಹನವೊಂದು ಉರುಳಿದ ಘಟನೆ ಶೃಂಗೇರಿಯಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಸಮೀಪದಲ್ಲಿರುವ ದುರ್ಗಾ ದೇವಸ್ಥಾನದ ಸಮೀಪದ ತಿರುವಿನಲ್ಲಿ ಈ ಘಟನೆ ನಡೆದಿದೆ. ಚಾಲಕನ ಆಯಾ ತಪ್ಪಿ ರಸ್ತೆಯ ಪಕ್ಕಕ್ಕೆ ಟೆಂಪೋ ಟ್ರಾವೆಲರ್ ವಾಹನ ಉರುಳಿದೆ, ಅದೃಷ್ಟವಶಾತ್ ವಾಹನದಲ್ಲಿದ್ದವರಿಗೆ ಯಾವುದೇ ಪ್ರಾಣಹಾನಿ ಅಥವಾ ನೋವುಗಳು ಸಂಭವಿಸಿಲ್ಲ. ವಾಹನ ಉರುಳಿದ ಸ್ಥಳಕ್ಕೆ ಅನೇಕ ಸ್ಥಳೀಯರು ತೆರಳಿ ವೀಕ್ಷಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ :ಕಾಫಿನಾಡಿನಲ್ಲಿ ಭೀಕರ ಅಗ್ನಿ ಅವಘಡ; ಹೊತ್ತಿ ಉರಿದ ಮೂರು ಎಕರೆ ಅಡಿಕೆ ತೋಟ
ವಾಹನ ಚಾಲನೆ ಮಾಡುತ್ತಿದ್ದ ಚಾಲಕನು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ, ವಾಹನದಲ್ಲಿ ಹದಿಮೂರು ಜನ ಪ್ರಯಾಣ ನಡೆಸುತ್ತಿದ್ದು ವಾಹನವು ಶೃಂಗೇರಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಕಡೆಗೆ ಸಾಗುತ್ತಿತ್ತು ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಕುಖ್ಯಾತ ಖದೀಮರ ಬಂಧನ; ಎಂಟು ಬೈಕ್ ವಶಕ್ಕೆ
ಮಲೆನಾಡು ಭಾಗದ ರಸ್ತೆಗಳು ಹೆಚ್ಚಿನ ತಿರುವುಗಳನ್ನು ಹೊಂದಿರುವ ಕಾರಣ ಚಾಲಕರು ಹೆಚ್ಚಿನ ಗಮನವನ್ನು ರಸ್ತೆಯ ಮೇಲಿರಿಸಿ, ಅತೀ ವೇಗದಿಂದ ವಾಹನವನ್ನು ಚಲಾಯಿಸದೆ ಹೆಚ್ಚಿನ ಜಾಗರೂಕತೆಯಿಂದ ಈ ಭಾಗಗಳಲ್ಲಿ ಸಂಚಾರ ಮಾಡಬೇಕಿದೆ.

0 Comments