ಮೂಡಿಗೆರೆ : ರೈತನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಬ್ಯಾಂಕ್ ಹಾಗೂ ಇತರರಿಂದ ಕೈ ಸಾಲ ಪಡೆದು ಸಾಲದ ಬಾಧೆಯನ್ನು ತಡೆಯಲಾರದೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೆಗ್ಗರವಳ್ಳಿ ಗ್ರಾಮದ ಹೆಚ್.ಬಿ ಈರೇಗೌಡ ಎಂಬ ರೈತ ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಈ ಬಾರಿ ಮಲೆನಾಡಿನಲ್ಲಿ ಉಂಟಾದ ಮಳೆಗೆ ಸಂಪೂರ್ಣವಾಗಿ ಅವರ ತೋಟದ ಬೆಳೆಗಳು ನಾಶವಾದ ಕಾರಣ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಈ ಕುರಿತು ತನಿಖೆ ಆರಂಭಿಸಿದ್ದಾರೆ.

ಈ ಬಾರಿ ಮಲೆನಾಡಿನಲ್ಲಿ ಉಂಟಾದ ಮಳೆಗೆ ಅನೇಕ ರೈತರ ಬೆಳೆಗಳು ನಾಶವಾಗಿದ್ದು ಈ ಕುರಿತು ಆದಷ್ಟು ಶೀಘ್ರವಾಗಿ ಪರಿಹಾರ ದೊರಕಿಸಿಕೊಡಬೇಕೆಂದು ಆಗ್ರಹಿಸಿದರು ಕೂಡ ಸರ್ಕಾರ ರೈತರ ಕಷ್ಟಕ್ಕೆ ಸ್ಪಂದಿಸದೆ ಇರುವುದೇ ರೈತರು ಈ ರೀತಿಯ ನಿರ್ಧಾರ ಕೈಗೊಳ್ಳುವಂತೆ ಮಾಡುತ್ತಿದೆ ಎಂದು ಸ್ಥಳೀಯ ರೈತರು ದೂರಿದ್ದಾರೆ.

ತನು ಕೊಟ್ಟಿಗೆಹಾರ, ವರದಿಗಾರರು