ಶೃಂಗೇರಿ :(ನ್ಯೂಸ್ ಮಲ್ನಾಡ್ ವರದಿ) ಮಲೆನಾಡಿನ ಪ್ರಖ್ಯಾತ ವೆರಿಕೋಸ್ ವೇನ್ಸ್ ತಜ್ಞ ವೈದ್ಯ ಡಾಕ್ಟರ್ ಎಂವಿ ಉರಾಳ ಅವರು ವೆರಿಕೋಸ್ ವೇನ್ಸ್ ಉಚಿತ ತಪಾಸಣಾ ಶಿಬಿರ ಆಯೋಜಿಸಿದ್ದಾರೆ.

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿರುವ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿವರ್ಗದವರಿಗೆ ವೆರಿಕೋಸ್ ವೇನ್ಸ್ ಸಮಸ್ಯೆಯ ಕುರಿತಾಗಿ ಹಾಗೂ ವೆರಿಕೋಸ್ ವೇನ್ಸ್ ರೋಗವನ್ನು ತಡೆಗಟ್ಟುವ ಸಲುವಾಗಿ ದಿನಾಂಕ 18.01.2022 ರ ಮಂಗಳವಾರದಂದು ಒಂದು ದಿನದ ಉಚಿತ ಕಾರ್ಯಾಗಾರವನ್ನು ಹಾಗೂ ಉಚಿತ ತಪಾಸಣಾ ಶಿಬಿರವನ್ನು ಮಂಗಳೂರಿನಲ್ಲಿ ಆಯೋಜಿಸಿದ್ದಾರೆ.

ಪೊಲೀಸರು ಸದಾಕಾಲ ಜನತೆಗೆ ನೀಡುವ ಸೇವೆಯನ್ನು ಸ್ಮರಿಸುವ ಸಲುವಾಗಿ ಪೊಲೀಸ್ ಸಹೋದರರ ಸೇವೆಯನ್ನು ಗುರುತಿಸುವ ಸಲುವಾಗಿ ಈ ಕಾರ್ಯಾಗಾರವನ್ನು ಮಾಡಲಾಗುವುದು ಹಾಗೂ ರಿಯಾಯಿತಿ ದರದಲ್ಲಿ ಔಷದ ವಿತರಣೆ ನಡೆಸಲಾಗುವುದು ಎಂದು ವೆರಿಕೋಸ್ ವೇನ್ಸ್ ತಜ್ಞವೈದ್ಯ ಡಾ.ಎಂ ವಿ ಉರಾಳ್ ತಿಳಿಸಿದ್ದಾರೆ.

ತಪಾಸಣಾ ಶಿಬಿರ ನಡೆಯುವ ಸ್ಥಳ :
ಪೊಲೀಸ್ ಕಮೀಷನರ್ ಕಾನ್ಫರೆನ್ಸ್ ಹಾಲ್ ಮಂಗಳೂರು
9980362370