ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಪತ್ನಿಯ ಬೆತ್ತಲೆ ವಿಡಿಯೋ ಮಾಡಿಕೊಂಡು ವರದಕ್ಷಿಣೆ ತಂದು ಕೊಡುವಂತೆ ಪತಿ ಕಿರುಕುಳ ನೀಡಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಹೋಬಳಿಯ ಮಹಿಳೆಗೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ವೆಲ್ ಕಂ ಗೇಟ್ ನಿವಾಸಿ ಸಲ್ಮಾನ್ ಎಂಬಾತ ತನ್ನ ಕುಟುಂಬದವರೊಂದಿಗೆ ವರದಕ್ಷಿಣೆಗಾಗಿ ಕಿರುಕುಳ ನೀಡಿದ್ದಾನೆ. ಈ ಕುರಿತು ಮನನೊಂದು ಕಿರುಕುಳಕ್ಕೊಳಗಾದ ಸಂತ್ರಸ್ತೆ ಪತಿ ಸಲ್ಮಾನ್, ಅತ್ತೆ ಸಾಹೀರ,ಮಾವ ಶೌಕತ್ ಅವರ ಮೇಲೆ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮದುವೆಯಾಗುವ ಮೊದಲು 90 ಗ್ರಾಂ ಚಿನ್ನ ಹಾಗೂ 3 ಲಕ್ಷ ಹಣ ನೀಡಲು ಮಹಿಳೆಯ ತಂದೆ ಒಪ್ಪಿದ್ದರು ಹಾಗೂ 2 ಲಕ್ಷ ಹಣ ಮತ್ತು 04 ಗ್ರಾಂ ತೂಕದ ಉಂಗುರ ಹಾಗೂ 90 ಗ್ರಾಂ ಆಭರಣ ನೀಡಿದ್ದರು ಎನ್ನಲಾಗಿದೆ, ಆದರೆ ಉಳಿದ ಒಂದು ಲಕ್ಷ ರೂ ಹಣಕ್ಕಾಗಿ ಪತಿ ಹಾಗೂ ಅತ್ತೆ ಮಾವ ತೀವ್ರ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಪತ್ನಿ ದೂರು ದಾಖಲಿಸಿದ್ದಾರೆ.
ಬೆತ್ತಲೆ ವೀಡಿಯೋ ಎಲ್ಲೆಡೆ ಶೇರ್ ಮಾಡುತ್ತೇನೆಂದು ಬೆದರಿಕೆ :
ಮಹಿಳೆಯ ಬೆತ್ತಲೆ ವಿಡಿಯೋವನ್ನು ಎಲ್ಲೆಡೆ ಶೇರ್ ಮಾಡುತ್ತೇನೆ ಎಂದು ಆಕೆಯ ಪತಿಯೇ ಬೆದರಿಸಿದ್ದಾನೆ, ಹಲವು ಬಾರಿ ಬೆತ್ತಲೆ ವಿಡಿಯೋ ಮಾಡಿ ಸ್ನ್ಯಾಪ್ ಚಾಟ್ ಗೆ ಅಪ್ಲೋಡ್ ಮಾಡುವಂತೆ ದೈಹಿಕವಾಗಿ ಹಿಂಸೆ ನೀಡುತ್ತಿದ್ದ ಒಂದು ವೇಳೆ ಕಳುಹಿಸದೆ ಹೋದಲ್ಲಿ ಆತನ ಬಳಿ ಇರುವ ವಿಡಿಯೋವನ್ನು ಎಲ್ಲೆಡೆ ಹಾಕುತ್ತೇನೆ ಎಂದು ಪತಿ ಸಲ್ಮಾನ್ ಬೆದರಿಸುತ್ತಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ಗಂಭೀರವಾಗಿ ಆರೋಪಿಸಿದ್ದಾರೆ ಹಾಗೂ ಒಂದು ವೇಳೆ ವರದಕ್ಷಿಣೆ ತರದೇ ಹೋದಲ್ಲಿ ಕೊಲೆ ಮಾಡುವುದಾಗಿ ಪತಿ ಬೆದರಿಕೆ ಹಾಕಿದ್ದಾನೆ ಎಂದು ತಿಳಿಸಿದ್ದಾರೆ.
ಆದರೆ ಗಂಡನ ಕುಟುಂಬದವರು ಈ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.
ಈ ಕುರಿತಾಗಿ ದೂರು ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ ಮುಂಬರುವ ದಿನಗಳಲ್ಲಿ ಈ ಕುರಿತು ಸಂಪೂರ್ಣ ಮಾಹಿತಿ ದೊರೆಯಬೇಕಿದೆ.

0 Comments