ಶೃಂಗೇರಿ :(ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ತಹಸೀಲ್ದಾರ್ ಅಂಬುಜಾ ಹಾಗೂ ಶೃಂಗೇರಿಯ ನೆಮ್ಮಾರು ಪಂಚಾಯಿತಿಯ ಗ್ರಾಮ ಲೆಕ್ಕಿಗ ಸಿದ್ದಪ್ಪ ಇಬ್ಬರನ್ನೂ ಹಕ್ಕುಪತ್ರ ಹಗರಣ ಸಂಬಂಧ ಲಂಚ ಪಡೆಯುವಾಗ ನೆನ್ನೆ ಎಸಿಬಿ ಬಂಧಿಸಿತ್ತು.
ಶೃಂಗೇರಿಯ ಕಾವಡಿ ವಾಸಿ ಸಂಜಯ್ ಕುಮಾರ್ ಎಂಬುವವರ ದೂರಿನ ಅನ್ವಯ ಎಸಿಬಿ ದಾಳಿ ನಡೆಸಿದ್ದು, ಹಣ ಪಡೆಯುವಾಗ ಗ್ರಾಮ ಲೆಕ್ಕಿಗ ಸಿದ್ದಪ್ಪ ಶೃಂಗೇರಿಯ ನಿರೀಕ್ಷಣಾ ಮಂದಿರದಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದನು. ನಂತರ ತಹಸೀಲ್ದಾರ್ ಅಂಬುಜಾರನ್ನು ತನಿಖೆಗೆ ಒಳಪಡಿಸಲಾಗಿತ್ತು, ತನಿಖೆಯ ಆಧಾರದ ಮೇಲೆ ಈಗ ಇಬ್ಬರನ್ನೂ ಬಂಧಿಸಲಾಗಿತ್ತು. ತಹಶೀಲ್ದಾರ್ ಎ1 ಆರೋಪಿಯಾಗಿದ್ದು, ಸಿದ್ದೇಶ್ ಎ2 ಆಗಿದ್ದಾನೆ.
ಇದನ್ನೂ ಓದಿ: ಭೀಕರ ಅಗ್ನಿ ಅವಘಡ ; ಕೋಟ್ಯಾಂತರ ಮೌಲ್ಯದ ವಸ್ತುಗಳು ನಾಶ
ನೆನ್ನೆ ತಡರಾತ್ರಿ ವರೆಗೂ ಶೃಂಗೇರಿ ನಿರೀಕ್ಷಣಾ ಮಂದಿರದಲ್ಲಿ ವಿಚಾರಣೆ ನಡೆಸಿದ ಅಧಿಕಾರಿಗಳು ರಾತ್ರಿ ಜಡ್ಜ್ ಮುಂದೆ ಹಾಜರುಪಡಿಸಿದ್ದರು, ಎಸಿಬಿ ಮೂಲಗಳ ಪ್ರಕಾರ ಜನವರಿ 20ನೇ ತಾರೀಖಿನ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಅಧಿಕಾರಿಗಳ ಎದುರು ಹೈಡ್ರಾಮ : ನೆನ್ನೆ ರಾತ್ರಿ ಶೃಂಗೇರಿ ನಿರೀಕ್ಷಣಾ ಮಂದಿರದಲ್ಲಿ ತನಿಖೆ ನಡೆಸುತ್ತಿದ್ದ ವೇಳೆ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಒಗ್ಗೂಡಿ ಅಂಬುಜಾ ಅವರ ವಿರುದ್ಧ ಕ್ರಮ ಕೈಗೊಳ್ಳಬಾರದು, ಬಡವರಿಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಒತ್ತಾಯಿಸಿದ್ದರು. ಆದರೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಹೇಳಿದ್ದರು.
ಆದರೆ ಇನ್ನೋರ್ವ ಗ್ರಾಮ ಲೆಕ್ಕಿಗ, ಸಂಪೂರ್ಣ ಹಗರಣದ ರೂವಾರಿ, ಬಡವರ ರಕ್ತ ಹೀರಿದ್ದ ರೋಲ್ಕಾಲ್ ಸತೀಶ ಸಧ್ಯ ಎಸ್ಕೇಪ್ ಆಗಿದ್ದು, ತನಿಖೆಯ ಆಧಾರದ ಮೇಲೆ ಆತನನ್ನೂ ಹೆಡೆಮುರಿ ಕಟ್ಟುತ್ತಾರಾ, ಮುದ್ದೆ ಮುರಿಯಲು ಜೊತೆಯಾಗ್ತಾನಾ ಕಾದುನೋಡಬೇಕಿದೆ.

0 Comments