ಮೂಡಿಗೆರೆ : ಕಾಫಿನಾಡಿನಲ್ಲಿ ಮತ್ತೆ ಹುಲಿ ದಾಳಿ ಮರುಕಳಿಸಿದೆ, ಹಸುವಿನ ಮೇಲೆ ದಾಳಿ ನಡೆಸಿದ ಹುಲಿಯು ಹಸುವನ್ನುಕೊಂದಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿಯ ಭಾರತಿಬೈಲ್ ನ ಕನ್ಗೆರೆ ಎಂಬಲ್ಲಿ ಹಸುವನ್ನು ಹುಲಿಕೊಂದು ಹಾಕಿದೆ. ಈ ಹಸುವು ಕನ್ಗೆರೆ ಧನುಷ್ ಎಂಬುವವರಿಗೆ ಸೇರಿದ್ದಾಗಿದೆ.
ಈ ಭಾಗದಲ್ಲಿ ನಡೆಯುತ್ತಿರುವ ಹುಲಿ ದಾಳಿಯ ಕುರಿತಾಗಿ ಈಗಾಗಲೇ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಮತ್ತು ಶೀಘ್ರವಾಗಿ ಪರಿಹರಿಸುವಂತೆ ಮನವಿ ಸಲ್ಲಿಸಲಾಗಿದೆ, ಅಧಿಕಾರಿಗಳೂ ಕೂಡ ಈ ಕುರಿತು ಪೂರಕವಾಗಿ ಸ್ಪಂದನೆ ನೀಡಿದ್ದಾರೆ. ಆದಷ್ಟು ಶೀಘ್ರವಾಗಿ ಹುಲಿ ದಾಳಿ ನಿಯಂತ್ರಿಸುವ ಸಲುವಾಗಿ ಯೋಜನೆಗಳು ತಯಾರಾಗಲಿದೆ - ಮೋಹನ್ ಕುಮಾರ್, ಮೂಡಿಗೆರೆ ವಲಯ ಸಂರಕ್ಷಣಾಧಿಕಾರಿ
ಘಟನಾ ಸ್ಥಳಕ್ಕೆ ಅರಣ್ಯ ರಕ್ಷಕ ಮೊಹಸಿನ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ ಹಾಗೂ ಹುಲಿ ಹೆಜ್ಜೆಯ ಗುರುತನ್ನು ಪತ್ತೆ ಮಾಡಿದ್ದಾರೆ. ಮೂಡಿಗೆರೆಯ ಭಾರತಿಬೈಲು ಗ್ರಾಮದ ಸಮೀಪದಲ್ಲಿ ಅನೇಕ ಸಮಯಗಳಿಂದ ಹುಲಿ ದಾಳಿಯ ಭೀತಿ ಎದುರಾಗಿತ್ತು.
ಇದನ್ನೂ ಓದಿ : ಆತ್ಮಹತ್ಯೆಗೆ ಶರಣಾದ ರೈತ ; ಸಾಲಬಾಧೆ ಶಂಕೆ
ಕೆಲ ದಿನಗಳ ಕಾಲ ನಿರಾತಂಕವಾಗಿ ತೋಟ ಗದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ತೋಟದ ಕಾರ್ಮಿಕರು ಈ ದಾಳಿಯಿಂದಾಗಿ ಮತ್ತೆ ಆತಂಕಕ್ಕೀಡಾಗಿದ್ದಾರೆ.
ತನು ಕೊಟ್ಟಿಗೆಹಾರ, ವರದಿಗಾರರು

0 Comments