ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮದ ಸಮೀಪದ ಕಾಫಿ ತೋಟದಲ್ಲಿ ಗಿಡಗಳ ಮಧ್ಯೆ ಹುಲಿ ಓಡಾಡುವುದು ಕಂಡು ಬಂದಿದೆ. ಇದನ್ನು ಗಮನಿಸಿದ ಅಲ್ಲಿನ ತೋಟದ ಕಾರ್ಮಿಕರು ಹಾಗೂ ಸ್ಥಳೀಯರು ಕೆಲಕಾಲ ಹೆದರಿ ಕಂಗಾಲಾಗಿದ್ದಾರೆ.
ಈಗಾಗಲೇ ಹುಲಿಯನ್ನು ಹಿಡಿಯಲು ನಾನಾ ಕಸರತ್ತುಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ನಡೆಸುತ್ತಿದ್ದಾರೆ ಅಂತಹುದರಲ್ಲಿ ಆರಾಮವಾಗಿ ಹುಲಿ ತೋಟದಲ್ಲಿ ಓಡಾಟ ನಡೆಸಿರುವುದು ಅಲ್ಲಿನ ಕಾರ್ಮಿಕರನ್ನು ಭಯಪಡುವಂತೆ ಮಾಡಿದೆ.
ಕಾಫಿಹಣ್ಣು ಹಾಗೂ ಕಾಳು ಮೆಣಸು ಕೊಯಿಲಿನ ಸಮಯ ಇದಾಗಿದ್ದರಿಂದ ಬಹುತೇಕ ಜನರು ತೋಟದಲ್ಲಿ ಕಾರ್ಯಮಗ್ನರಾಗಿರುತ್ತಾರೆ ಅಂತಹ ಸಮಯದಲ್ಲಿ ಹುಲಿ ಕಂಡಿರುವುದು ಕೆಲವರನ್ನು ಭಯಕ್ಕೀಡುಮಾಡಿದೆ. ಈ ಭಾಗದಲ್ಲಿ ಹುಲಿಯು ಹಸುಗಳನ್ನು ಕೊಂದು ಹಾಕುತ್ತಿರುವ ಪ್ರಕರಣವು ಹೆಚ್ಚಾಗಿ ಕೇಳಿಬರುತ್ತಿಯುವ ಕಾರಣ ಆದಷ್ಟು ಶೀಘ್ರವಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಹುಲಿಯನ್ನು ಸೆರೆ ಹಿಡಿಯುವ ಮೂಲಕ ಭಯಭೀತ ವಾತಾವರಣವನ್ನು ನಿಶ್ಚಿಂತಾಯುತವಾಗಿ ಮಾರ್ಪಾಡು ಮಾಡಬೇಕೆಂದು ಸಾರ್ವಜನಿಕರು ಕೋರಿದ್ದಾರೆ.

0 Comments