ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಬಾಬ್ರಿ ಮಸೀದಿಯನ್ನು ಕೆಡವಿದ ಹಾಗೆ ಶ್ರೀರಂಗಪಟ್ಟಣದ ಮಸೀದಿಯನ್ನು ಕೆಡವುವಂತೆ ವಿಡಿಯೋ ಮಾಡಿದ್ದ ಕಾಳಿ ಮಠದ ಸ್ವಾಮಿಜಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಸಮಾಜದಲ್ಲಿ ಕೋಮು ಸೌಹಾರ್ದತೆಗೆ ಋಷಿಕುಮಾರ ಸ್ವಾಮೀಜಿಗಳ ಹೇಳಿಕೆಯಿಂದಾಗಿ ಧಕ್ಕೆ ಉಂಟಾಗಬಹುದು ಎಂಬ ಕಾರಣಕ್ಕೆ ಚಿಕ್ಕಮಗಳೂರಿನಲ್ಲಿದ್ದ ಅವರನ್ನು ಪೊಲೀಸರು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.
ಸೋಮವಾರ ಸ್ವಾಮೀಜಿ ಮಸೀದಿಯ ಮುಂದೆ ನಿಂತುಕೊಂಡು ಇದು ಮೊದಲು ಹಿಂದೂ ದೇವಾಲಯವಾಗಿತ್ತು ಇದನ್ನು ಮುಸ್ಲಿಮರು ಕೆಡವಿ ಅಲ್ಲಿಯೇ ಮಸೀದಿಯನ್ನು ನಿರ್ಮಿಸಿದ್ದಾರೆ ಎಂದು ಆರೋಪಿಸಿದ್ದರು ಇದು ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ವೈರಲ್ ಆಗಿತ್ತು.
ಇದನ್ನೂ ಓದಿ :
ಮಲೆನಾಡಿನಲ್ಲಿ ಭೀಕರ ರಸ್ತೆ ಅಪಘಾತ; ಇಬ್ಬರ ದುರ್ಮರಣ
ಈ ಮಸೀದಿಯನ್ನು ಆದಷ್ಟು ಬೇಗ ಬಾಬ್ರಿ ಮಸೀದಿ ಕೆಡವಿದ ಹಾಗೆ ಕೆಡವಬೇಕು ಅಲ್ಲದೇ ಹಿಂದೂಗಳು ಆದಷ್ಟು ಬೇಗನೆ ಜಾಗೃತರಾಗಿ ಒಡೆಯಬೇಕಾದ ಮಸೀದಿಗಳಲ್ಲಿ ಇದು ಸಹ ಒಂದು ಎಂದು ಮಸೀದಿಯ ಎದುರು ನಿಂತು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಇಂದು ಬೆಳಿಗ್ಗೆ 4-30 ಕ್ಕೆ ಪೊಲೀಸರು ಸ್ವಾಮೀಜಿಗಳನ್ನು ಬಂಧಿಸಿ ಶ್ರೀರಂಗಪಟ್ಟಣಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ ಎಂಬ ಮಾಹಿತಿ ದೊರೆತಿದೆ.

0 Comments