ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಕೆಫೆ ಕಾಫಿ ಡೇ ಸಂಸ್ಥಾಪಕ ಚಿಕ್ಕಮಗಳೂರಿನ ಹೆಮ್ಮೆಯ ಉದ್ಯಮಿ ವಿ.ಜಿ ಸಿದ್ದಾರ್ಥ್ ಹೆಗ್ಡೆ ಅವರು ಆತ್ಮಹತ್ಯೆ ಮಾಡಿಕೊಂಡು ಎರಡೂವರೆ ವರ್ಷ ಕಳೆಯುತ್ತಾ ಬಂದಿದೆ ಅವರ ಸಾವಿನ ನಂತರ ಇಡೀ ಕಂಪನಿಯು ಸಂಪೂರ್ಣ ನಶಿಸಿ ಹೋಗುತ್ತದೆ ಎಂದು ಎಲ್ಲರೂ ಅಂದುಕೊಂಡಾಗ ಅಳಿಯುವ ದಡದಿಂದ ಉಳಿಯುವ ಕಡೆಗೆ ಇಡೀ ಕಂಪನಿಯನ್ನು ದಿವಂಗತ ವಿ.ಜಿ ಸಿದ್ದಾರ್ಥ ಅವರ ಪತ್ನಿ ಮಾಳವಿಕಾ ಹೆಗ್ಡೆ ಕೊಂಡೊಯ್ದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಅತ್ಯುತ್ತಮ ಉದ್ಯಮಿ ಅನೇಕ ಜನರಿಗೆ ಮಾರ್ಗದರ್ಶಕರಾಗಿದ್ದ ಮಲೆನಾಡಿನ ಹೆಮ್ಮೆಯ ವ್ಯಕ್ತಿ ವಿ.ಜಿ ಸಿದ್ದಾರ್ಥ್ ಹೆಗ್ಡೆ ಅವರು ಕೆಫೆ ಕಾಫಿ ಡೇ ಕಂಪನಿಯು ಹಲವಾರು ಕೋಟಿಗಳಷ್ಟು ಹಣ ನಷ್ಟ ಹೊಂದಿದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕುರಿತಾಗಿ ಡೆತ್ ನೋಟ್ ಕೂಡ ಬರೆದಿಟ್ಟಿದ್ದರು ಒಂದೆಡೆ ಸಾಲಗಾರರ ಕಾಟ ಇನ್ನೊಂದೆಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಉತ್ತರಿಸಲಾರದೆ ಅವರು ಆತ್ಮಹತ್ಯೆಗೆ ಶರಣಾಗಿರುವುದಾಗಿ ಡೆತ್ ನೋಟ್ ನಲ್ಲಿ ದಾಖಲಿಸಿದ್ದರು.
ಇದನ್ನೂ ಓದಿ :
ದಯಾಮರಣಕ್ಕೆ ಒಪ್ಪಿಗೆ ನೀಡುವಂತೆ ರಾಷ್ಟ್ರಪತಿಗೆ ಪತ್ರ ಬರೆದ ಗ್ರಾಮಸ್ಥರು.
ಆದರೆ ಇದೀಗ ಕಂಪನಿಯನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ ಸಿದ್ದಾರ್ಥ್ ರ ಪತ್ನಿ ಮಾಳವಿಕಾ ಹೆಗ್ಡೆ. ಬಹಳಷ್ಟು ನಷ್ಟದಿಂದ ಕೂಡಿದ್ದ ಕಂಪನಿಯು ಇದೀಗ ಮಾಳವಿಕಾ ಹೆಗ್ಡೆ ಅವರಿಂದಾಗಿ ಚೇತರಿಕೆ ಕಾಣುತ್ತಿದೆ. ಹೆಚ್ಚಿನ ಆಸಕ್ತಿಯಿಂದ ಮಾಳವಿಕಾ ಹೆಗಡೆಯವರು ಕೆಫೆ ಕಾಫಿ ಡೇ ಅನ್ನು ಮುಂದುವರೆಸುತ್ತಿದ್ದಾರೆ, ಉಂಟಾಗಿದ್ದ ನಷ್ಟವನ್ನು ಅಲ್ಪಪ್ರಮಾಣದಲ್ಲಿ ಭರಿಸುವ ಮೂಲಕ ಕಾಫಿ ಡೇ ಮುನ್ನಡೆಸುವ ಸದೃಢ ಆತ್ಮವಿಶ್ವಾಸ ಹೊಂದಿದ್ದಾರೆ.
2020ರಲ್ಲಿ ಸಂಪೂರ್ಣವಾಗಿ ಕಂಪನಿಯ ಮಾಹಿತಿ ಪಡೆದ ಮಾಳವಿಕಾ ಹೆಗ್ಡೆ ಅವರು ಕಂಪನಿಯನ್ನು ನಷ್ಟದಿಂದ ಮೇಲಕ್ಕೆ ತರುವ ಸಲುವಾಗಿ ಬಹಳಷ್ಟು ಚುರುಕಾಗಿ ಕಾರ್ಯ ನಿರ್ವಹಿಸಿದರು ಹಾಗೂ ಕಂಪನಿಯನ್ನು ನಿಧಾನವಾಗಿ ಲಾಭದೆಡೆಗೆ ತಂದರು.
ನಷ್ಟದಲ್ಲಿದ್ದ ಕಂಪನಿಯ ಷೇರುಗಳು ಇದೀಗ ಕೊಂಚ ಮಟ್ಟದ ಏರಿಕೆ ಕಂಡಿದೆ. ಕಂಪನಿಯ ಮೇಲೆ ಅತ್ಯಂತ ಹೆಚ್ಚಿನ ಭರವಸೆಯನ್ನು ಹೊಂದಿರುವ ಮಾಳವಿಕಾ ಅವರು ಇದೀಗ ಕಂಪನಿಯನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತಾರೆ ಎಂದು ಹಲವರು ಆಶಾವಾದ ವ್ಯಕ್ತಪಡಿಸಿದ್ದಾರೆ.

0 Comments