ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ವ್ಯಾಪ್ತಿಯ ವಲಯಕ್ಕೆ ಮೊದಲ ಮಹಿಳಾ ವಲಯ ಅರಣ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಶಿಲ್ಪಾ ಎಸ್  ಎಲ್ ಅವರಿಗೆ ಹಸಿರು ಸೇನಾನಿ ಪ್ರಶಸ್ತಿ ಲಭಿಸಿತ್ತು.

ಸದಾ ಹಚ್ಚ ಹಸಿರಿನಿಂದ ಕಂಗೊಳಿಸುವ ಮಲೆನಾಡು ಭಾಗದ ದಟ್ಟ ಅರಣ್ಯ ಪ್ರದೇಶಗಳು ಪ್ರಾಣಿ ಪಕ್ಷಿಗಳ ಜೀವಸಂಕುಲಕ್ಕೆ ಆಶ್ರಯಾಧಮವಾಗಿದೆ. ಈ ಭಾಗದ ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆಗಾಗಿ ದಿಟ್ಟ, ಸಮರ್ಪಿತ ಅಧಿಕಾರಿಯಾದ ಶಿಲ್ಪಾ ಎಸ್.ಎಲ್ ಹಸಿರು ಸೇನಾನಿ ಪ್ರಶಸ್ತಿಗೆ ಭಾಜನರಾಗಿದ್ದರು.

ಶಿಲ್ಪಾ ಅವರು ಈ ಹಿಂದಿನಿಂದಲೂ ಕೂಡ ಸಮರ್ಪಕವಾಗಿ ತಮ್ಮ ಕಾರ್ಯವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಮಲೆನಾಡು ಭಾಗದ ಚಿಕ್ಕಮಗಳೂರು ವ್ಯಾಪ್ತಿಯ ಅತೀ ದೊಡ್ಡ ಅರಣ್ಯ ವಲಯವಾಗಿದ್ದು ಈ ವಲಯಕ್ಕೆ ನಿಯೋಜನೆ ಮಾಡಲ್ಪಟ್ಟ ಮೊಟ್ಟ ಮೊದಲ ಮಹಿಳಾ ಅಧಿಕಾರಿಯಾಗಿ ಶಿಲ್ಪ ಅವರು ಆಯ್ಕೆಗೊಂಡಿದ್ದರು. ಶಿಲ್ಪಾ ಅವರು ವನ್ಯಜೀವಿಗಳನ್ನು ಹಾಗೂ ಜೀವಿ ಸಂಕುಲವನ್ನು ಉಳಿಸುವಲ್ಲಿ ಅಗಾಧವಾದ ಕಾರ್ಯಗಳನ್ನು ಮಾಡಿದ್ದಾರೆ ಈ ಹಿನ್ನೆಲೆ ಅವರಿಗೆ ಹಲವಾರು ಉನ್ನತ ಪ್ರಶಸ್ತಿಗಳು ಲಭಿಸಿದೆ. 

ಇದನ್ನೂ ಓದಿ :ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಕೊಳೆತ ಮೃತದೇಹ ಪತ್ತೆ.

2020ರಲ್ಲಿ ಮುಖ್ಯಮಂತ್ರಿ ಚಿನ್ನದ ಪದಕವನ್ನು ಶಿಲ್ಪ ರವರು ಗಳಿಸಿದ್ದಾರೆ, ವನ್ಯಜೀವಿಗಳನ್ನು ಹಾಗೂ ಅರಣ್ಯವನ್ನು ಸಂರಕ್ಷಿಸುವಲ್ಲಿ ಅವರು ಇಟ್ಟ ಹೆಜ್ಜೆಗಳಿಗೆ ಹಾಗೂ ಅವರ ನಿರ್ಭೀತ ಕಾರ್ಯಗಳಿಗೆ ಈ ಪ್ರಶಸ್ತಿ ಲಭಿಸಿತ್ತು ಹಾಗೂ ರಾಷ್ಟ್ರಮಟ್ಟದ ಹಸಿರು ಸೇನಾನಿ ಪ್ರಶಸ್ತಿ 2021 ನೇ ಸಾಲಿನಲ್ಲಿ ಶಿಲ್ಪಾ ಎಸ್ ಎಲ್ ಅವರಿಗೆ ದೊರಕಿತ್ತು 

ಅತ್ಯಂತ ವಿಸ್ತಾರವಾದ ಅರಣ್ಯ ಪ್ರದೇಶವನ್ನು ಹೊಂದಿರುವ ಚಿಕ್ಕಮಗಳೂರು ವಲಯದ ಅರಣ್ಯ ಅಧಿಕಾರಿಯಾಗಿದ್ದ ಶಿಲ್ಪಾ ಎಸ್.ಎಲ್ ರವರು ಸಮಾಜದ ಒಳಿತಿಗಾಗಿ ಇನ್ನಷ್ಟು ಹೆಚ್ಚಿನ ಕಾರ್ಯಗಳನ್ನು ಮಾಡಲಿ ವನ್ಯಜೀವಿಗಳ ರಕ್ಷಣೆಮಾಡುವ ಸಲುವಾಗಿ ಇನ್ನಷ್ಟು ಹೆಚ್ಚಿನ ಕೆಲಸಗಳು ಶಿಲ್ಪಾ ಅವರಿಂದಾಗಲಿ ಎಂದು ಸಾರ್ವಜನಿಕರಿಂದ ಶುಭ ಹಾರೈಕೆಗಳು