ಚಿಕ್ಕಮಗಳೂರು : ಅನುಮಾನಾಸ್ಪದವಾಗಿ ವಿವಾಹಿತ ಮಹಿಳೆಯು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನ ಅರಣ್ಯ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಚಿಕ್ಕಮಗಳೂರು ತಾಲೂಕಿನ ಜಡಗನಹಳ್ಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ ಆಶ್ಚರ್ಯಕರ ಎಂಬಂತೆ ಮೃತ ಪತ್ನಿಯ ಜೊತೆಗೆ ಪತಿಯೂ ಕೂಡ ರಾತ್ರಿಇಡೀ ಕಾಡಿನಲ್ಲೇ ಇದ್ದದ್ದು ಅನೇಕ ಅನುಮಾನಗಳನ್ನು ಹುಟ್ಟು ಹಾಕಿದೆ. ಒಂದು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿಯು ಕಾಡಿನಲ್ಲಿ ರಾತ್ರಿಇಡೀ ನಿರ್ಜನವಾದ ಅರಣ್ಯ ಪ್ರದೇಶದಲ್ಲಿ ಕಾಲ ಕಳೆದದ್ದು ಅನೇಕ ಅನುಮಾನಗಳನ್ನು ಹುಟ್ಟುಹಾಕಿದೆ.
ಇದನ್ನೂ ಓದಿ : ಮನೆಯಲ್ಲಿದ್ದ ಚಿನ್ನಾಭರಣ ಹಣ ದೋಚಿದ್ದ ಖದೀಮ ಅಂದರ್; ಕಾಫಿನಾಡಿನ ಪೊಲೀಸರ ಯಶಸ್ವಿ ಕಾರ್ಯಾಚರಣೆ
ಮೃತ ವಿವಾಹಿತ ಮಹಿಳೆಯನ್ನು ಸುಮಾ ಎಂದು ಗುರುತಿಸಲಾಗಿದೆ. ಈ ಅನುಮಾನಾಸ್ಪದ ಸಾವಿಗೆ ನಿಖರ ಕಾರಣಗಳೇನು ಎಂದು ಇನ್ನಷ್ಟೇ ತಿಳಿಯಬೇಕಿದೆ. ಘಟನಾ ಸ್ಥಳವಾದ ಅರಣ್ಯ ಪ್ರದೇಶಕ್ಕೆ ಪೊಲೀಸರು ಮೃತಳ ಸಂಬಂಧಿಕರು ಹಾಗೂ ಅನೇಕ ಸ್ಥಳೀಯರು ತೆರಳಿದ್ದಾರೆ.
ಘಟನೆಯ ಕುರಿತು ಚಿಕ್ಕಮಗಳೂರಿನ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಈ ಕುರಿತು ತನಿಖೆ ಆರಂಭಿಸಿದ್ದಾರೆ ಹಾಗೂ ಸ್ಥಳ ಪರಿಶೀಲನೆ ನಡೆಸಿದ್ದಾರೆ ಘಟನೆಗೆ ನಿಖರ ಕಾರಣಗಳೇನು ಎಂದು ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ.
ತನು ಕೊಟ್ಟಿಗೆಹಾರ, ವರದಿಗಾರರು

0 Comments