ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಅಗಳಗಂಡಿ ನಿವಾಸಿ ಬೆಳ್ಳಪ್ಪ ಗೌಡ ಎಂಬುವವರು ಕೂಲಿ ಕೆಲಸ ಮಾಡಿಕೊಂಡು ಮಕ್ಕಳೊಂದಿಗೆ ಮನೆಯಲ್ಲಿ ವಾಸವಿದ್ದರು ಜನವರಿ 13 ನೇ ತಾರೀಕು ಕೂಲಿ ಕೆಲಸಕ್ಕೆಂದು ತೆರಳಿದವರು ಈವರೆಗೂ ಹಿಂದಿರುಗಿಲ್ಲ ಆದಕಾರಣ ಆದಷ್ಟು ಬೇಗ ಅವರನ್ನು ಹುಡುಕಿ ಕೊಡಬೇಕೆಂದು ಅವರ ಪುತ್ರ ಚೇತನ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ :ಶೃಂಗೇರಿಯಲ್ಲಿ ಭೀಕರ ಸರಣಿ ಅಪಘಾತ; ಓರ್ವ ಸಾವು, ಹಲವರು ಆಸ್ಪತ್ರೆಗೆ ದಾಖಲು
ಊರಿನ ಅಕ್ಕಪಕ್ಕದ ಮನೆ ಸಂಬಂಧಿಕರ ಮನೆ ಸುತ್ತಮುತ್ತ ಹುಡುಕಾಡಿದರೂ ಕೂಡ ಎಲ್ಲಪ್ಪ ಗೌಡ ಅವರು ಸಿಗದ ಕಾರಣ ಪೊಲೀಸ್ ಠಾಣೆಗೂ ದೂರು ಸಲ್ಲಿಸಿದ್ದಾರೆ ಬೆಳ್ಯಪ್ಪ ಗೌಡ ಅವರನ್ನು ಕಂಡವರು ಕೂಡಲೇ ಚೇತನ್ ರವರಿಗೆ ಕರೆಮಾಡಲು ಕೋರಿದ್ದಾರೆ.
ಬೆಳ್ಳಪ್ಪ ಗೌಡ ಅವರು ಮನೆಯಿಂದ ತೆರಳುವಾಗ ಕಾಫಿ ಬಣ್ಣದ ಪ್ಯಾಂಟ್ ಹಾಗೂ ಬಿಳಿಗೆರೆಯುಳ್ಳ ಕಪ್ಪುಬಣ್ಣದ ಶರ್ಟ್ ಧರಿಸಿರುತ್ತಾರೆ, ಕೋಲುಮುಖ, ತಲೆ ಕೂದಲು ಮೀಸೆ ಗಡ್ಡ ಬಿಳಿಯಬಣ್ಣದ್ದಾಗಿರುತ್ತದೆ, ಗೋಧಿ ಮೈಬಣ್ಣ, 5.2 ಎತ್ತರ ಕನ್ನಡ ಮತ್ತು ತುಳು ಭಾಷೆಯನ್ನು ಮಾತನಾಡುತ್ತಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ವ್ಯಕ್ತಿಯನ್ನು ಕಂಡವರು ಅವರ ಪುತ್ರ ಚೇತನ್ ರವರ ಮೊಬೈಲ್ ಸಂಖ್ಯೆ 9483115894 ಅಥವಾ 8123550994 ಗೆ ಕರೆ ಮಾಡಿ ತಿಳಿಸುವಂತೆ ಕೋರಿದ್ದಾರೆ.

0 Comments