ಕಡೂರು : (ನ್ಯೂಸ್ ಮಲ್ನಾಡ್ ವರದಿ) ಎಟಿಎಂ ಮಿಷನ್ ನಿಂದ ವ್ಯಕ್ತಿಯೋರ್ವರು ಹಣ ತೆಗೆಯುವ ಸಂದರ್ಭದಲ್ಲಿ ಅವರಿಗೆ ಸಹಾಯ ಮಾಡುವ ಹೆಸರಿನಲ್ಲಿ ಹಣ ವಂಚನೆ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕಡೂರಿನ ಸಿಂಗಟಗೆರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂಗೆ ಹಣ ತೆಗೆಯಲು ತೆರಳಿದ ವ್ಯಕ್ತಿಯೋರ್ವರಿಗೆ ಸಹಾಯ ಮಾಡುವುದಾಗಿ ತಿಳಿಸಿ ವ್ಯಕ್ತಿಯ ಎಟಿಎಂ ಪಿನ್ ನಂಬರನ್ನು ತಿಳಿದುಕೊಂಡು ಅವರು ಎಟಿಎಂ ಬಳಸಿದ ನಂತರ ಅದೇ ತರನಾಗಿ ಹೋಲುವ ಬೇರೊಂದು ಎಟಿಎಂ ಕಾರ್ಡನ್ನು ಅವರಿಗೆ ನೀಡಿ ಅವರನ್ನು ವಂಚಿಸಿದ್ದಾರೆ. ಆ ವ್ಯಕ್ತಿಯು ಸ್ಥಳದಿಂದ ತೆರಳಿದ ಕೂಡಲೇ ಅವರ ಕಾರ್ಡನ್ನು ಬಳಸಿ ಹಣ ದೋಚಿದ್ದಾರೆ.

ಹಾಗೂ ಬಸ್ ನಿಲ್ದಾಣದಲ್ಲಿ ಓರ್ವರ ಬ್ಯಾಗ್ ನಿಂದ ಎಟಿಎಂ ಕಾರ್ಡನ್ನು ಕಳವು ಮಾಡಿ ಕಾರ್ಡಿನ ಪೌಚ್ ನಲ್ಲಿ ಬರೆಯಲಾಗಿದ್ದ ಬರೆಯಲಾಗಿದ್ದ ಪಿನ್ ನಂಬರನ್ನು ನೋಡಿಕೊಂಡು ಹಣ ಲಪಟಾಯಿಸಿದ್ದ ಆರೋಪಿಯನ್ನು ಕಡೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 06 ಎಟಿಎಂ ಕಾರ್ಡ್, ಹಣ ಹಾಗೂ ಬೈಕ್ ವಶಪಡೆದಿದ್ದಾರೆ. 

ಇದನ್ನೂ ಓದಿ : ಹಾವು ಕಚ್ಚಿ ಮಹಿಳೆ ಸಾವು; ಸೂಕ್ತ ಸಮಯದಲ್ಲಿ ದೊರೆಯದ ಔಷಧಿ

ಸಾರ್ವಜನಿಕರು, ಎಟಿಎಂ ಕಾರ್ಡ್ ಹಾಗೂ ಮಿಷನ್ ಬಳಕೆ ಮಾಡುವವರು ಈ ಕುರಿತು ಸಂಪೂರ್ಣ ಜ್ಞಾನವನ್ನು ಹೊಂದಿ ಬಳಿಕವೇ ಎಟಿಎಂ ಬಳಸಬೇಕು ಅಪರಿಚಿತರಿಂದ ಮೋಸ ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ ಎಂದು ಪೊಲೀಸರು ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಸಿಪಿಐ ಕಡೂರು ವೃತ್ತ ಹಾಗೂ ಅವರೊಂದಿಗೆ ಇಲಾಖೆಯ ಸಿಬ್ಬಂದಿಗಳು ಪಾಲ್ಗೊಂಡು ಕಳ್ಳನನ್ನು ಹಿಡಿದಿದ್ದಾರೆ.