ನರಸಿಂಹರಾಜಪುರ : (ನ್ಯೂಸ್ ಮಲ್ನಾಡ್ ವರದಿ) ನರಸಿಂಹರಾಜಪುರದ ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಶಿಲುಬೆ ನಿರ್ಮಾಣ ಆಗಿದೆಯೆಂದು ಆರೋಪಿಸಿ ಕೂಡಲೇ ಶಿಲುಬೆಯನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ನರಸಿಂಹರಾಜಪುರ ಘಟಕವು ಕರಗುಂದ ಚಲೋ ಗೆ ಕರೆ ನೀಡಿದೆ.
ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಕಡಹೀನಬೈಲು ಗ್ರಾಮದ ಸರ್ವೇ ನಂಬರ್ 56ರ ಸರ್ಕಾರಿ ಕೆರೆ ಜಾಗದಲ್ಲಿ ನಿರ್ಮಿಸಿರುವ ಶಿಲುಬೆ ಅನಧಿಕೃತವಾಗಿದೆ ಈ ಕೂಡಲೇ ಅದನ್ನು ಅಲ್ಲಿಂದ ತೆಗೆಯಬೇಕು ಎಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ನರಸಿಂಹರಾಜಪುರ ಒತ್ತಾಯಿಸಿದೆ.
ಈ ಕುರಿತಾಗಿ ಜನವರಿ 05ರ ಬುಧವಾರ ಬೆಳಿಗ್ಗೆ 10 ಗಂಟೆಗೆ ಕರಗುಂದ ಚಲೋ ಗೆ ಕರೆ ನೀಡಿದೆ ಹಾಗೂ ಪ್ರತಿಭಟನಾ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದೆ.
ಅನಧಿಕೃತವಾಗಿ ಶಿಲುಬೆ ನಿರ್ಮಾಣ ಮಾಡಿರುವುದು ಸರಿಯಲ್ಲ ಸರ್ಕಾರಿ ಕೆರೆ ಜಾಗದಲ್ಲಿ ಈ ರೀತಿಯಾಗಿ ಶಿಲುಬೆಗಳನ್ನು ನಿರ್ಮಾಣ ಮಾಡಿ ಸಮಾಜದಲ್ಲಿ ಶಾಂತಿ ಕದಡುವ ಕೆಲಸವನ್ನು ಒಂದು ವರ್ಗವು ನಡೆಸುತ್ತಾ ಬಂದಿದೆ ಅದರ ವಿರುದ್ಧವಾಗಿ ನಮ್ಮ ಹೋರಾಟ ಸದಾ ನಡೆಯುತ್ತದೆ ಎಂದು ತಿಳಿಸಿದೆ.

0 Comments